ಸಾರಾಂಶ
ಮಳೆಯಲ್ಲಿ ರಾಗಿಣಿ ಕಿಶನ್ ರೊಮ್ಯಾನ್ಸ್. ಸರ್ಫ್ ರೋಶ್ ಹಾಡಿಗೆ ಮಾದಕವಾಗಿ ಮೈ ಬಳುಕಿಸಿದ ರಾಗಿಣಿ
ಸಿನಿವಾರ್ತೆ
ಸುರಿವ ಮಳೆಯಲ್ಲಿ ಹಿಂದಿ ಹಾಡಿಗೆ ಬೋಲ್ಡ್ ಆಗಿ ಸ್ಟೆಪ್ ಹಾಕಿದ್ದಾರೆ ರಾಗಿಣಿ ದ್ವಿವೇದಿ ಹಾಗೂ ಕಿಶನ್ ಬೆಳಗಲಿ.
ಮೂಲದಲ್ಲಿ ಇದು ಅಮೀರ್ ಖಾನ್ ಹಾಗೂ ಸೋನಾಲಿ ಬೇಂದ್ರೆ ನಟನೆಯ ಸೂಪರ್ ಹಿಟ್ ಸಿನಿಮಾ ‘ಸರ್ಫ್‌ರೋಶ್’ನ ಹಾಡು. ಈ ಸಿನಿಮಾ ಬಂದು 25 ವರ್ಷಗಳಾದ ಹಿನ್ನೆಲೆಯಲ್ಲಿ ಎಲ್ಲೆಡೆ ‘ಸರ್ಫ್‌ರೋಶ್’ನ ಮರು ಪ್ರದರ್ಶನ, ಹಾಡುಗಳಿಗೆ ರೀಲ್ಸ್ ಮಾಡೋದೆಲ್ಲ ನಡೀತಿದೆ.
ಇದರಿಂದ ಪ್ರೇರಿತರಾಗಿ ಕಿಶನ್ ಹಾಗೂ ರಾಗಿಣಿ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಮೂಲ ಹಾಡಿನಲ್ಲಿದ್ದಂತೆ ಹರಿವ ತೊರೆಯ ಪಕ್ಕ ಸುರಿವ ಮಳೆಗೆ ರಾಗಿಣಿ ಮಾದಕವಾಗಿ ಮೈ ಬಳುಕಿಸಿದ್ದಾರೆ.