ರಾಗಿಣಿ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.

‘ರಾಮರಸ’ ಚಿತ್ರದ ಹೊರತಾಗಿ ಜಟ್ಟ ಗಿರಿರಾಜ್‌ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ರಾಗಿಣಿ ನಟಿಸಲಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.

ಜಟ್ಟ ಗಿರಿರಾಜ್‌, ‘ಕೌಂಡಿನ್ಯ ನನ್ನ ನೆಚ್ಚಿನ ಲೇಖಕರು. ಅವರ ಕಥೆಗಳಿಂದ ಪ್ರೇರಿತನಾಗಿ ಈ ಚಿತ್ರಕ್ಕೆ ಕಥೆ ಮಾಡಿದ್ದೇನೆ. ರಾಗಿಣಿ ಜೊತೆ ಇದು ನನ್ನ ಮೊದಲ ಸಿನಿಮಾ’ ಎಂದರು.

ರಾಗಿಣಿ, ‘ಚಿತ್ರದ ಫಸ್ಟ್‌ ಲುಕ್‌ನಂತೆಯೇ ಚಿತ್ರದ ಶೀರ್ಷಿಕೆ ಕೂಡ ಸಖತ್ತಾಗಿದೆ. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಿದ್ದೇವೆ’ ಎಂದರು. ರಾಮಕೃಷ್ಣ ನಿಗಾಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.