ರಾಜ ರಾಣಿ ಚಿತ್ರದ ಹಾಡು, ಟೀಸರ್‌ ಅನಾವರಣ

| Published : Mar 31 2024, 02:01 AM IST / Updated: Mar 31 2024, 02:02 AM IST

ರಾಜ ರಾಣಿ ಚಿತ್ರದ ಹಾಡು, ಟೀಸರ್‌ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಜರಾಣಿ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಇದು ಹೊಸಬರೇ ಸೇರಿ ಮಾಡಿರುವ ಚಿತ್ರ.

ಕನ್ನಡಪ್ರಭ ಸಿನಿವಾರ್ತೆ

ಪ್ರೇಮ ಕತೆಯನ್ನು ಹೇಳುವ ‘ರಾಜ ರಾಣಿ’ ಚಿತ್ರದ ಆಡಿಯೋ ಹಾಗೂ ಟೀಸರ್‌ ಬಿಡುಗಡೆ ಬಂದಿದೆ. ಈ ಚಿತ್ರವನ್ನು ವಿಜಯ್‌ ಬಳ್ಳಾರಿ, ನೇತ್ರಾವತಿ ಮಲ್ಲೇಶ್‌ ನಿರ್ಮಾಣ ಮಾಡಿದ್ದಾರೆ. ಮಧುಸೂದನ್, ಲೀಲಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಬಳ್ಳಾರಿ ಮೂಲದ ರಣಧೀರ್‌ ಚಿತ್ರದ ನಾಯಕನಾಗುವ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ರಣಧೀರ್‌ ಮಾತನಾಡಿ, ‘ಮೂರು ಕನ್ನಡ, ಒಂದು ತಮಿಳು ಚಿತ್ರದಲ್ಲಿ ನಟಿಸಿದ ಅನುಭವದ ಮೇರೆಗೆ ಈ ಚಿತ್ರ ಮಾಡಿದ್ದೇನೆ. ಲೂಸ್‌ಮಾದ ಯೋಗಿ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅನಾಥ ಹುಡುಗನಿಗೆ ಅಜ್ಜಿಯೊಬ್ಬಳು ಹೇಳುವ ರಾಣಿ ಕತೆಯ ಮೂಲಕ ಚಿತ್ರದ ನಾಯಕ ಎಲ್ಲವನ್ನು ಪಡೆದುಕೊಳ್ಳುತ್ತಾ ಹೋಗುವುದು ಚಿತ್ರದ ಕತೆ’ ಎಂದರು.

ನಟಿ ಅದ್ವಿತಿ ಶೆಟ್ಟಿ, ಹಿರಿಯ ಪತ್ರಕರ್ತ ಸದಾಶಿವ ಶೆಣೈ ಹಾಗೂ ಸಮಾಜಸೇವಕ ಕೃಷ್ಣಮೂರ್ತಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಮಂಡ್ಯ ಮೂಲದ ರಿತನ್ಯಾ ಶೆಟ್ಟಿ ಚಿತ್ರದ ನಾಯಕಿಯಾಗಿದ್ದಾರೆ. ಜೀವನ್‌ ಉಪನಾಯಕ. ಗಿರಿಜಾ ಲೋಕೇಶ್‌, ಶೋಭರಾಜ್‌, ಬಿರಾದಾರ್‌, ಕಿಲ್ಲರ್‌ ವೆಂಕಟೇಶ್‌, ಗಿರೀಶ್‌ ಜತ್ತಿ, ಚಂದ್ರಪ್ರಭ ನಟಿಸಿದ್ದಾರೆ. ಸಾಹಿತ್ಯ ರಚಿಸಿ ಸಂಗೀತ ನೀಡಿರುವುದು ಸುಧನ್‌ ಪ್ರಕಾಶ್‌. ಛಾಯಾಗ್ರಹಣ ಮಧು-ಶರತ್ ಅವರದ್ದು.