ರಾಜು ಅನಂತಸ್ವಾಮಿ ಹೆಸರಿನಲ್ಲಿ ಇಂದು ಸುಗಮ ಸಂಗೀತ ಸಂಜೆ

| Published : Apr 19 2024, 01:00 AM IST / Updated: Apr 19 2024, 06:56 AM IST

ರಾಜು ಅನಂತಸ್ವಾಮಿ ಹೆಸರಿನಲ್ಲಿ ಇಂದು ಸುಗಮ ಸಂಗೀತ ಸಂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಗಮ ಸಂಗೀತ ಕ್ಷೇತ್ರದ ಖ್ಯಾತ ಗಾಯಕ ರಾಜು ಅನಂತ ಸ್ವಾಮಿ ಅವರ ಹುಟ್ಟುಹಬ್ಬದ (ಏ.19) ಅಂಗವಾಗಿ ಬೆಂಗಳೂರಿನಲ್ಲಿ ಸುಗಮ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸುಗಮ ಸಂಗೀತ ಲೋಕದ ದಿಗ್ಗಜ, ಗಾಯಕ ರಾಜು ಅನಂತಸ್ವಾಮಿ ನೆನಪಿನಲ್ಲಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು (ಏ.19) ‘ರಾಜು ದಿ ಲೆಜೆಂಡ್’ ಕಾರ್ಯಕ್ರಮ ಬೆಂಗಳೂರಿನ ಕೋಣನಕುಂಟೆ ಬಳಿಯ ಶ್ರೀಹರಿ ಖೋಡೆ ಆಡಿಟೋರಿಯಂನಲ್ಲಿ ನಡೆಯಲಿದೆ.

ಡ್ರಮ್ಮರ್ ಮಂಜನಾಥ್ ಸತ್ಯಶೀಲ್ ಹಾಗೂ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, ಸಂಗೀತ ನಿರ್ದೇಶಕರಾದ ಪ್ರವೀಣ್ ಡಿ ರಾವ್, ಪ್ರವೀಣ್, ಪ್ರದೀಪ್ ಹಾಗೂ ಗಾಯಕಿ ದಿವ್ಯ ರಾಘವನ್ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಕುರಿತು ಅನನ್ಯ ಭಟ್‌, ‘ರಾಜು ಅನಂತಸ್ವಾಮಿ ಹಾಡುಗಳನ್ನು ಕೇಳಿ ಬೆಳೆದ ನನಗೆ ಅವರ ಹೆಸರಿನಲ್ಲೊಂದು ಕಾರ್ಯಕ್ರಮ ಮಾಡಬೇಕೆನಿಸಿತು. ರಾಜು ಅನಂತಸ್ವಾಮಿ ಅವರ ಹದಿನೆಂಟು ಹಾಡುಗಳ ಗಾಯನದ ಜತೆಗೆ ಆಧುನಿಕ ತಂತ್ರಜ್ಞಾನವಾದ ಎಐ ಮೂಲಕ ರಾಜು ಅನಂತಸ್ವಾಮಿ ಕುರಿತಾದ ವಿಷುಯಲ್ಸ್ ಪ್ರದರ್ಶನ ಕೂಡ ಮಾಡಲಿದ್ದೇವೆ’ ಎಂದರು. ಕಾರ್ಯಕ್ರಮದ ಟಿಕೆಟ್ ಬೆಲೆ 299 ರೂಪಾಯಿ.