ಸಾರಾಂಶ
ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ಮಿಥ್ಯ ಪ್ರದರ್ಶನ
ಸಿನಿವಾರ್ತೆ
ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಮಿಥ್ಯ’ ಸಿನಿಮಾ ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವದಲ್ಲಿ ಜೂ.2ರಂದು ಪ್ರದರ್ಶನ ಕಾಣಲಿದೆ. ತಂದೆ ತಾಯಿಯನ್ನು ಕಳೆದುಕೊಂಡ 11 ವರ್ಷದ ಬಾಲಕನ ನೋವನ್ನು ಬಗೆಯುವ ಈ ಚಿತ್ರವನ್ನು ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಮುಂಬೈಯ ಮಾಮಿ ಚಲನಚಿತ್ರೋತ್ಸವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲಾದೆಡೆ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ.