ಸಾರಾಂಶ
ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿರುವ ರೋಹಿತ್, ಅಪ್ಪು ಹುಟ್ಟುಹಬ್ಬದ ದಿನ 200 ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಿದ್ದಾರೆ. ರಕ್ತಾಕ್ಷ ಚಿತ್ರದ ಮೂಲಕ ರೋಹಿತ್ ನಾಯಕ ಮತ್ತು ನಿರ್ಮಾಪಕನಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
ರಕ್ತಾಕ್ಷ ಚಿತ್ರದ ನಟ ಹಾಗೂ ನಿರ್ಮಾಪಕ ರೋಹಿತ್ ಅವರು ಈ ವರ್ಷ ಪುನೀತ್‌ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು 200 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡುವ ಮೂಲಕ ಆಚರಿಸಿದ್ದಾರೆ. ಪುನೀತ್ ಅಭಿಮಾನಿಗಳ ಸಹಯೋಗದೊಂದಿಗೆ ‘ಅಪ್ಪು’ ಕುರಿತ ವಿಶೇಷ ವಿಡಿಯೋ ರೂಪಿಸಿ ಬಿಡುಗಡೆ ಮಾಡಿದ್ದಾರೆ. ಪ್ರತಿ ತಿಂಗಳು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಆಹಾರ ಕಿಟ್‌ಗಳನ್ನು ನೀಡುವ ಮೂಲಕ ಪುನೀತ್ ಹೆಸರಿನಲ್ಲಿ ಈ ಸೇವೆಯನ್ನು ಮುಂದುವರಿಸಲಿದ್ದಾರೆ ರೋಹಿತ್.ಅಪ್ಪು ಅವರ ಅಭಿಮಾನಿ ಆಗಿರುವ ಉತ್ತರ ಕರ್ನಾಟಕ ಮೂಲದ ರೋಹಿತ್, ಚಿತ್ರರಂಗಕ್ಕೆ ಬಂದು ವಾಸುದೇವ ಎಸ್ ಎನ್ ನಿರ್ದೇಶಿಸಿದ ‘ರಕ್ತಾಕ್ಷ’ ಚಿತ್ರದ ಮೂಲಕ ನಾಯಕ ಹಾಗೂ ನಿರ್ಮಾಪಕನಾಗಿದ್ದಾರೆ. ‘ರಕ್ತಾಕ್ಷ’ ಚಿತ್ರ ಈಗಾಗಲೇ ಸೆನ್ಸಾರ್ ಮುಗಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ನಡುವಿನ ಆಕ್ಷನ್ ಸನ್ನಿವೇಶ, ನಟ ವಸಿಷ್ಠ ಸಿಂಹ ಅವರು ಹಾಡಿರುವ ಚಿತ್ರದ ಟೈಟಲ್ ಟ್ರ್ಯಾಕ್ ಚಿತ್ರದ ಹೈಲೈಟ್. ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರಥ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಮುಂತಾದವರು ನಟಿಸಿದ್ದಾರೆ. ದಾಸ್ ಮೋಡ್ ಅವರ ಸಂಗೀತ, ಆದರ್ಶ್ ಶಿರಾಸ್ ಕ್ಯಾಮೆರಾ ಇದೆ.