ಸಾರಾಂಶ
ಸಿನಿವಾರ್ತೆ
ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಚಿತ್ರದ ಕ್ಯಾರೆಕ್ಟರ್ ಪಂಚ್ ಬಿಡುಗಡೆ ಮಾಡಲಾಗಿದೆ. ಟೀಸರ್ ರೂಪದಲ್ಲಿ ಬಿಡುಗಡೆ ಆಗಿರುವ ಈ ಕ್ಯಾರೆಕ್ಟರ್ ಪಂಚ್‌ನಲ್ಲಿ ಕಾರ್ತಿಕ್ ಮಹೇಶ್ ಪ್ರತಿಭೆಯನ್ನು ಅನಾವರಣಗೊಳಿಸಲಾಗಿದೆ.
ಜಟ್ಟಗಿರಿರಾಜ್ ನಿರ್ದೇಶನ, ಗುರು ದೇಶಪಾಂಡೆ ನಿರ್ಮಾಣದ ಚಿತ್ರವಿದು. ಜಿ ಅಕಾಡೆಮಿಯಲ್ಲಿ ನಟನೆಯ ಕಲಿತಿರುವ 15ಕ್ಕೂ ಹೆಚ್ಚು ಹೊಸ ಪ್ರತಿಭೆಗಳು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಆಗುತ್ತಿರುವುದು ವಿಶೇಷ.
ಕಾರ್ತಿಕ್ ಮಹೇಶ್, ‘ಇದು ನನ್ನ ಕ್ಯಾರೆಕ್ಟರ್ ಟೀಸರ್ ಅಂತಲೂ ಹೇಳಬಹುದು. ಎಲ್ಲರಿಗೂ ಇಷ್ಟವಾಗುವ ಸಿನಿಮಾ ಇದು. ಬಜೆಟ್ ಜಾಸ್ತಿ ಆಗುತ್ತಿದ್ದರೂ ಯಾವುದಕ್ಕೂ ಹಿಂಜರಿಯದೆ ಸಿನಿಮಾ ಮಾಡುತ್ತಿದ್ದಾರೆ ನಿರ್ಮಾಪಕರು’ ಎಂದರು.
ಜಟ್ಟ ಗಿರಿರಾಜ್, ‘ಚಿತ್ರ ಬಜೆಟ್‌ನಿಂದ ಹಿಡಿದು ಎಲ್ಲಾ ವಿಷಯದಲ್ಲೂ ದೊಡ್ಡದಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇದೆ’ ಎಂದರು. ಗುರು ದೇಶಪಾಂಡೆ, ‘ಈ ಚಿತ್ರದ ನಿರ್ಮಾಣಕ್ಕೆ ವಿಕ್ರಮಾದಿತ್ಯ ಜತೆಗೆಯಾಗಿದ್ದಾರೆ’ ಎಂದರು. ಪ್ರತೀಕ್ ಗುರುದೇಶಪಾಂಡೆ, ಛಾಯಾಗ್ರಾಹಕ ಕೃಷ್ಣ ಕುಮಾರ್ (ಕೆಕೆ) ಇದ್ದರು.