ಚಾರ್ಲಿಯನ್ನು ನೋಡಲು ಮೈಸೂರಿಗೆ ರಕ್ಷಿತ್ ಧಾವಿಸಿದ್ದೇಕೆ?

| Published : May 16 2024, 12:45 AM IST / Updated: May 16 2024, 08:04 AM IST

777 charlie
ಚಾರ್ಲಿಯನ್ನು ನೋಡಲು ಮೈಸೂರಿಗೆ ರಕ್ಷಿತ್ ಧಾವಿಸಿದ್ದೇಕೆ?
Share this Article
  • FB
  • TW
  • Linkdin
  • Email

ಸಾರಾಂಶ

ರಕ್ಷಿತ್‌ ಶೆಟ್ಟಿ ತರಾತುರಿಯಲ್ಲಿ ಮೈಸೂರಿಗೆ ಹೋಗಿ ಇನ್‌ಸ್ಟಾ ಲೈವ್‌ಗೆ ಬಂದಿದ್ದಾರೆ. ಕಾರಣ ಏನಿರಬಹುದು?

  ಸಿನಿವಾರ್ತೆ : ಸೂಪರ್‌ ಹಿಟ್‌ ಸಿನಿಮಾ ‘777 ಚಾರ್ಲಿ’ಯ ಕೇಂದ್ರ ಪಾತ್ರವೇ ಚಾರ್ಲಿ ನಾಯಿ. ಈ ನಾಯಿ ಇದೀಗ ಆರು ಮರಿಗಳಿಗೆ ಜನ್ಮ ನೀಡಿದೆ. ಸಿನಿಮಾದ ನಾಯಕ, ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಮೈಸೂರಿನಲ್ಲಿರುವ ಚಾರ್ಲಿ ಟ್ರೈನರ್‌ ಪ್ರಮೋದ್‌ ಅವರ ಮನೆಗೆ ಭೇಟಿ ನೀಡಿ ಚಾರ್ಲಿ ಮರಿಗಳ ಜೊತೆಗೆ ಲೈವ್‌ಗೆ ಬಂದಿದ್ದಾರೆ. 

ಈ ವೇಳೆ ಮಾತನಾಡಿದ ಅವರು, ‘777 ಚಾರ್ಲಿ ಸಿನಿಮಾ ರಿಲೀಸ್‌ ಆದಮೇಲೂ ಚಾರ್ಲಿ ತಾಯಿಯಾದರೆ ಎಷ್ಟು ಚಂದ, ಈ ಜರ್ನಿಯ ಸರ್ಕಲ್‌ ಸಹ ಕಂಪ್ಲೀಟ್‌ ಆಗುತ್ತೆ ಎಂದು ನಾವೆಲ್ಲ ಅಂದುಕೊಂಡಿದ್ದೆವು. ನಾನು ಪ್ರತೀ ಬಾರಿ ಚಾರ್ಲಿಯ ಟ್ರೈನರ್‌ ಪ್ರಮೋದ್‌ ಅವರಿಗೆ ಕಾಲ್‌ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದೆ. ಇದೀಗ ಮೇ 9ಕ್ಕೆ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. 5 ಹೆಣ್ಣು, 1 ಗಂಡು ಮರಿ ಆರೋಗ್ಯದಿಂದಿವೆ. ಇವುಗಳನ್ನು ನೋಡಲೆಂದೇ ಮೈಸೂರಿಗೆ ಬಂದೆ. ಬಹಳ ಸಂತೋಷವಾಯಿತು’ ಎಂದಿದ್ದಾರೆ.