ಜಿಮ್‌ ನಲ್ಲಿ ಬರೋಬ್ಬರಿ 100 ಕೆಜಿ ವೈಟ್‌ ಲಿಫ್ಟಿಂಗ್‌ ಮಾಡಿ ತನ್ನ ಸ್ಟ್ರೆಂಥ್‌ ಆ್ಯಂಡ್‌ ಸ್ಟ್ಯಾಮಿನಾ ತೋರಿಸಿದ್ದಾರೆ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ

ಚೋಟುದ್ದದ ಬಳುಕೋ ಬಳ್ಳಿ ರಶ್ಮಿಕಾ ಮಂದಣ್ಣ ಬರೋಬ್ಬರಿ 100 ಕೆಜಿ ಭಾರ ಎತ್ತಿದ್ದಾರೆ. ಇದು ಹೇಗೆ ಸಾಧ್ಯ ಅಂತ ಹುಬ್ಬೇರಿಸಿದವರಿಗೆ ‘ಎಲ್ಲಾ ನೈಟ್‌ ಶಿಫ್ಟ್‌ ಪ್ರಭಾವ’ ಅಂತ ಉತ್ತರ ನೀಡಿದ್ದಾರೆ.

ಮುಂಬೈಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ತಮಿಳು ಸ್ಟಾರ್‌ ನಟ ಧನುಷ್‌ ಅಭಿನಯದ ‘ಕುಬೇರ’ ಸಿನಿಮಾ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ಆದರೆ ಇದು ನೈಟ್‌ ಶೂಟ್‌. ‘ನಿತ್ಯ ನಡೆಯುವ ಈ ನೈಟ್‌ ಶೂಟ್‌ನಿಂದ ನನ್ನ ರಾತ್ರಿ ಹಗಲಾಗಿದೆ, ಹಗಲು ರಾತ್ರಿ ಆಗಿದೆ. ಈ ನೈಟ್‌ಶೂಟ್‌ನಿಂದ ಸರಿಯಾಗಿ ವರ್ಕೌಟ್‌ ಮಾಡೋದಕ್ಕೂ ಸಾಧ್ಯವಾಗುತ್ತಿಲ್ಲ. ಇದರಿಂದ ಮನಸ್ಸಿಗೆ ಚಡಪಡಿಕೆ ಆಗುತ್ತದೆ. ಈ ಮೈಂಡ್‌ಸೆಟ್‌ನಲ್ಲಿ ರಾತ್ರಿ ಶೂಟ್‌ಗೆ ಹೋಗೋ ಮೊದಲು ವರ್ಕೌಟ್‌ ಮಾಡುತ್ತೇನೆ. 100 ಕೆಜಿ ಭಾರ ಎತ್ತುವ ಸಾಹಸವನ್ನೂ ಮಾಡಿದ್ದೇನೆ’ ಎಂದಿದ್ದಾರೆ.

ನೈಟ್‌ ಶೂಟ್‌ ಮುಗಿಸಿ ಬಂದು ಮಧ್ಯಾಹ್ನ ಹನ್ನೆರಡಕ್ಕೆ ಮಲಗಿ ಸಂಜೆ ಆರಕ್ಕೆ ಏಳುವ ಹಿಂಸೆ ಯಾರಿಗೂ ಬೇಡ ಅಂತಲೂ ರಶ್ಮಿಕಾ ಹೇಳಿಕೊಂಡಿದ್ದಾರೆ.