ಸಾರಾಂಶ
ರತ್ನ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಸಾಕಷ್ಟು ವಿಶೇಷತೆಗಳಿಂದ ಈ ಸಿನಿಮಾ ಕೂಡಿದೆ.
ಕನ್ನಡಪ್ರಭ ಸಿನಿವಾರ್ತೆ
ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ ‘ರತ್ನ’ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಆನಂದ್ ಅಪ್ಪು, ಹರ್ಷಲ ಹನಿ, ವರ್ಧನ್ ನಟಿಸಿರುವ ಚಿತ್ರವಿದು. ‘ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದೇವೆ. ಇದು ನಾವು ಅವರಿಗೆ ಸಲ್ಲಿಸುವ ಗೌರವ’ ಎಂದು ಬಸವರಾಜ್ ಬಳ್ಳಾರಿ ಹೇಳಿಕೊಂಡರು.ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್‌ಕೆ ವಿಶ್ವನಾಥ್ ಟ್ರೇಲರ್ ಬಿಡುಗಡೆ ಮಾಡಿದರು. ನಾಗೇಂದ್ರ ಅರಸ್, ಆನಂದ್ ಅಪ್ಪು, ವರ್ಧನ್, ಅಮಿತ್ ರಾವ್ ಇದ್ದರು. ಬಾಲರಾಜ್ ಒಡೆಯರ್, ಸಾರಿಕಮ್ಮ, ಅಮಿತ್ ರಾವ್, ರಾಣಿ ಬಸವರಾಜ್, ರಾಮು ಕರೂರ್, ಸುಚಿತ್ ಚೌಹಾಣ್, ಮಂಜು ದೈವಜ್ಞ ನಟಿಸಿದ್ದಾರೆ. ಸತೀಶ್ ಬಾಬು ಸಂಗೀತ ಸಂಯೋಜನೆ, ಸತೀಶ್ ಗಂಗಾವತಿ ಛಾಯಾಗ್ರಹಣ ಚಿತ್ರಕ್ಕಿದೆ.