ಚೋಲಿ ಕೇ ಪೀಚೆ ಕ್ಯಾ ಹೈ!

| Published : Feb 16 2024, 01:49 AM IST

ಸಾರಾಂಶ

ಛೋಲಿ ಕೆ ಪೀಚೆ ಕ್ಯಾ ಹೈ - ರವಿಕೆ ಪ್ರಸಂಗ ಸಿನಿಮಾ ವಿಮರ್ಶೆ

ಚಿತ್ರ: ರವಿಕೆ ಪ್ರಸಂಗ

ತಾರಾಗಣ: ಗೀತಾಭಾರತಿ ಭಟ್‌, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್ನಿರ್ದೇಶನ: ಸಂತೋಷ್ ಕೊಡೆಂಕೇರಿರೇಟಿಂಗ್: 3- ಪ್ರಿಯಾ ಕೆರ್ವಾಶೆರವಿಕೆಯ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ಸಮಸ್ಯೆಗಳ ಬಗ್ಗೆ ಹೇಳುವ ಪ್ರಯತ್ನ ಸಿನಿಮಾದ ಉದ್ದೇಶ. ಕೊಂಚ ಲಘು ಧಾಟಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪರಿಸರದ ಹಿನ್ನೆಲೆಯಲ್ಲಿ ಕಥೆಯ ಆರಂಭ. ಸಾನ್ವಿ ಸಂಪಾಜೆ ಎಂಬ ಇಪ್ಪತ್ತೆಂಟರ ಹರೆಯದ ಹೆಣ್ಣುಮಗಳ ಮದುವೆ ವಿಚಾರದಿಂದ ಕಥೆ ಶುರುವಾಗುತ್ತದೆ. ಅವಳ ದೇಹದ ತೂಕ, ಅವಳು ಹಾಕುವ ಕರಾರುಗಳು ಮದುವೆ ಅಡ್ಡಿಯಾಗುತ್ತವೆ. ಕೊನೆಗೂ ಒಬ್ಬ ಹುಡುಗನ ಫೋಟೋ ಇಷ್ಟವಾಗಿ ಆತನನ್ನು ಈಕೆ ಭೇಟಿ ಮಾಡಬೇಕು ಎನ್ನುವಾಗ ರವಿಕೆ ಅಡ್ಡಿಯಾಗುತ್ತದೆ. ಅದು ಹೇಗೆ ಎಂಬುದು ಕಥೆ. ಟೈಲರ್ ಅಷ್ಟೊತ್ತಿಗೆ ರವಿಕೆ ಹೊಲಿದುಕೊಟ್ಟಿರಲಿಕ್ಕಿಲ್ಲ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಮತ್ತೇನು ಕಾರಣ ಎಂಬುದನ್ನು ಸಿನಿಮಾದಲ್ಲಿ ನೋಡಬಹುದು.ಸಮಸ್ಯೆಯನ್ನು ಪ್ರತಿಯೊಬ್ಬರೂ ಗ್ರಹಿಸುವ ರೀತಿ ಬೇರೆ ಬೇರೆ. ಇಲ್ಲಿ ಸಾನ್ವಿ ಹೇಗೆ ಗ್ರಹಿಸಿದಳು ಅನ್ನುವುದಕ್ಕೆ ಸಿನಿಮಾ ಕೊನೆಯಲ್ಲಿ ಕ್ಲಾರಿಟಿ ಸಿಗುತ್ತದೆ. ಈ ನಡುವೆ ಕಥೆಗೆ ಹೊರತಾದ ಅನೇಕ ವಿಚಾರಗಳು ಬಂದುಹೋಗುತ್ತವೆ. ಕೆಲವು ಕಡೆ ನಗಿಸುವ ಪ್ರಯತ್ನವನ್ನೂ ಚಿತ್ರ ಮಾಡುತ್ತದೆ. ಸುಳ್ಯ ಮಡಿಕೇರಿ ಆಸುಪಾಸಿನ ಪರಿಸರ, ಅಲ್ಲಿನ ಆಚರಣೆಗಳನ್ನು ಸಿನಿಮಾಕ್ಕೆ ಪೂರಕವಾಗಿ ತರುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಸಿನಿಮಾದ ಕೊನೆಯ ಕೋರ್ಟ್ ಸೀನ್‌ ಪ್ರೇಕ್ಷಕರನ್ನು ಹಿಡಿದಿಡುತ್ತದೆ.ಗೀತಾಭಾರತಿ ಭಟ್ ನಟನೆ ಚೆನ್ನಾಗಿದೆ. ಎರಡನೇ ಭಾಗದಲ್ಲಿ ರಾಕೇಶ್ ಮಯ್ಯ ಅವರದು ಉತ್ತಮ ಪಾತ್ರ ನಿರ್ವಹಣೆ ಇದೆ.