ಕೌನ್‌ ಬನೇಗ ಕರೋಡ್‌ಪತಿಯಲ್ಲಿ ಗೆದ್ದ ಹಣ ದೈವ ನರ್ತಕರಿಗೆ ಮತ್ತು ಸರ್ಕಾರಿ ಶಾಲೆಗೆ : ರಿಷಬ್ ಶೆಟ್ಟಿ

| N/A | Published : Oct 20 2025, 12:10 PM IST

Rishab Shetty
ಕೌನ್‌ ಬನೇಗ ಕರೋಡ್‌ಪತಿಯಲ್ಲಿ ಗೆದ್ದ ಹಣ ದೈವ ನರ್ತಕರಿಗೆ ಮತ್ತು ಸರ್ಕಾರಿ ಶಾಲೆಗೆ : ರಿಷಬ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಅಮಿತಾಬ್‌ ಬಚ್ಚನ್ ಹೋಸ್ಟ್ ಮಾಡುವ ‘ಕೌನ್‌ ಬನೇಗ ಕರೋಡ್‌ಪತಿ’ ಶೋಗೆ ರಿಷಬ್‌ ಶೆಟ್ಟಿ ತೆರಳಿದ್ದು ಅಲ್ಲಿ ಗೆದ್ದಿರುವ ಹಣವನ್ನು ದೈವ ನರ್ತಕರಿಗೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದ್ದಾರೆ.

 ಸಿನಿವಾರ್ತೆ

ಇತ್ತೀಚೆಗೆ ಅಮಿತಾಬ್‌ ಬಚ್ಚನ್ ಹೋಸ್ಟ್ ಮಾಡುವ ‘ಕೌನ್‌ ಬನೇಗ ಕರೋಡ್‌ಪತಿ’ ಶೋಗೆ ರಿಷಬ್‌ ಶೆಟ್ಟಿ ತೆರಳಿದ್ದು ಅಲ್ಲಿ ಗೆದ್ದಿರುವ ಹಣವನ್ನು ದೈವ ನರ್ತಕರಿಗೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದ್ದಾರೆ.

ಈ ಶೋದಲ್ಲಿ ಬರೋಬ್ಬರಿ 12.50 ಲಕ್ಷ ರು.ಗಳನ್ನು ರಿಷಬ್ ಗೆದ್ದಿದ್ದರು. ‘ನಾನು ರಿಷಬ್‌ ಫೌಂಡೇಶನ್‌ ಅನ್ನು ನಡೆಸುತ್ತಿದ್ದೇನೆ. ಕರೋಡ್‌ಪತಿ ಶೋದಲ್ಲಿ ಬಂದ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಾರ್ಯಕ್ಕೆ ಹಾಗೂ ದೈವ ನರ್ತಕರ ಏಳಿಗೆಗೆ ಬಳಸುತ್ತೇನೆ’ ಎಂದಿದ್ದಾರೆ.

ಇನ್ನೊಂದೆಡೆ ಕಾಂತಾರ ಚಾಪ್ಟರ್‌ 1 ಸಿನಿಮಾದ ಯಶಸ್ಸಿನ ಓಟ ಮುಂದುವರಿದಿದೆ. ಸಿನಿಮಾವನ್ನು ಒಮ್ಮೆ ನೋಡಿ ಮೆಚ್ಚಿದ ಮಂದಿ ಮತ್ತೆ ಮತ್ತೆ ಥೇಟರಿಗೆ ಎಡತಾಕುತ್ತಿದ್ದಾರೆ. ಜೊತೆಗೆ ಈ ವಾರ ದೀಪಾವಳಿಯ ಭರ್ಜರಿ ರಜೆಯೂ ಸಿನಿಮಾದ ಕಲೆಕ್ಷನ್‌ ಹೆಚ್ಚಿಸುವ ಸಾಧ್ಯತೆ ಇದೆ.

ಸದ್ಯ ವಿಶ್ವಾದ್ಯಂತ ಅಂದಾಜು ರು.800 ಕೋಟಿ ಸಂಗ್ರಹಿಸಿರುವ ಸಿನಿಮಾ 1000 ಕೋಟಿ ಕ್ಲಬ್‌ ಸೇರಲು ಕ್ಷಣಗಣನೆ ಶುರುವಾಗಿದೆ.

Read more Articles on