ಸಾರಾಂಶ
ಕಾಂತಾರ ಚಾಪ್ಟರ್ 1ಗೆ ಮತ್ತೆ ಶೂಟಿಂಗ್ ಶುರುವಾಗಿದೆ. ಆರ್‌ಆರ್‌ಆರ್ ಸಾಹಸ ನಿರ್ದೇಶಕ ರಿಷಬ್ ಗೆ ಸಾಥ್ ನೀಡುತ್ತಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣಕ್ಕೆ ಹಲವು ದಿನಗಳ ಕಾಲ ಬಿಡುವು ನೀಡಲಾಗಿತ್ತು. ಇದೀಗ ಮತ್ತೆ ಶೂಟಿಂಗ್ ಆರಂಭವಾಗಲಿದ್ದು, ಕುಂದಾಪುರದಲ್ಲಿರುವ ಸೆಟ್‌ನಲ್ಲಿ ಸತತ 60 ದಿನಗಳ ಕಾಲ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ. ಈ ಬಾರಿ ‘ಆರ್‌ಆರ್‌ಆರ್’ ಖ್ಯಾತಿಯ ಆ್ಯಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್ ಕರಾವಳಿ ನೆಲದ ದಂತಕತೆಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ಇದಾದ ಬಳಿಕ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಬನವಾಸಿ ಕದಂಬರ ಕಾಲದ ಕಥೆ ಇರುವ ‘ಕಾಂತಾರ 1’ ಚಿತ್ರ ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.