ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ರಿಷಬ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ‘ರಿಷಭೋತ್ಸವ’ ಜನವರಿ 3ರಂದು ಕುಂದಾಪುರದಲ್ಲಿ ನಡೆಯಲಿದೆ. ಕೋಟೇಶ್ವರದ ಯುವ ಮೆರಿಡಿಯನ್ ಫಿಲ್ಮ್ ಸ್ಟುಡಿಯೋದಲ್ಲಿ ನಡೆಯಲಿರುವ ಈ ಬೃಹತ್ ಮಟ್ಟದ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಸಿನಿವಾರ್ತೆ
ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ರಿಷಬ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ‘ರಿಷಭೋತ್ಸವ’ ಜನವರಿ 3ರಂದು ಕುಂದಾಪುರದಲ್ಲಿ ನಡೆಯಲಿದೆ.
ಯುವ ಮೆರಿಡಿಯನ್ ಫಿಲ್ಮ್ ಸ್ಟುಡಿಯೋದಲ್ಲಿ ಕಾರ್ಯಕ್ರಮ
ಕೋಟೇಶ್ವರದ ಯುವ ಮೆರಿಡಿಯನ್ ಫಿಲ್ಮ್ ಸ್ಟುಡಿಯೋದಲ್ಲಿ ನಡೆಯಲಿರುವ ಈ ಬೃಹತ್ ಮಟ್ಟದ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ದೇಶಾದ್ಯಂತ ಮನೆ ಮಾತಾಗಿರುವ ರಿಷಬ್
ಕುಂದಾಪುರದ ಕೆರಾಡಿ ಎಂದ ಸಣ್ಣ ಊರಲ್ಲಿ ಹುಟ್ಟಿ ದೇಶಾದ್ಯಂತ ಮನೆ ಮಾತಾಗಿರುವ ರಿಷಬ್ ಅವರಿಗೆ ಊರಿನ ಮಂದಿ ಹಾಗೂ ಅಭಿಮಾನಿಗಳು ಸೇರಿ ಈ ಅಭಿನಂದನಾ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದ ದಿಗ್ಗಜರು, ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

