ಮದುವೆ ಗೌನ್ ಮರು ವಿನ್ಯಾಸ ಮಾಡಿದ ಸಮಂತಾ

| Published : Apr 27 2024, 01:00 AM IST / Updated: Apr 27 2024, 05:29 AM IST

ಸಾರಾಂಶ

ಮುರಿದುಕೊಂಡ ಮದುವೆಯ ಬಗ್ಗೆ ಯೋಚಿಸೋದನ್ನು ಬಿಟ್ಟು ಮದುವೆ ದಿನ ತೊಟ್ಟಿದ್ದ ಗೌನ್‌ ಅನ್ನೇ ಮರು ವಿನ್ಯಾಸ ಮಾಡಿ ಪ್ರದರ್ಶಿಸಿದ್ದಾರೆ ನಟಿ ಸಮಂತಾ.

 ಸಿನಿವಾರ್ತೆ

ತೆಲುಗು ನಟಿ ಸಮಂತಾ ರುತ್‌ ಪ್ರಭು ವಿವಾಹದ ವೇಳೆ ತಾನು ಧರಿಸಿದ್ದ ಗೌನ್‌ ಅನ್ನು ಮರು ವಿನ್ಯಾಸ ಮಾಡಿದ್ದಾರೆ. 2017ರಲ್ಲಿ ನಾಗ ಚೈತನ್ಯ ಅವರನ್ನು ಸಮಂತಾ ಮದುವೆ ಆಗಿದ್ದರು. ಆದರೆ 2021ಕ್ಕೆ ಈ ಜೋಡಿ ಬೇರ್ಪಟ್ಟಿತು. ಅದಾಗಿ ವರ್ಷಗಳ ಬಳಿಕ ಸಮಂತಾ ಮದುವೆ ಗೌನ್‌ ಅನ್ನೇ ಮರು ವಿನ್ಯಾಸ ಮಾಡಿ ಬಳಸಲು ಮುಂದಾಗಿದ್ದಾರೆ.

‘ಆ ಗೌನ್‌ ಹಿಂದೆ ಸಾಕಷ್ಟು ಜನರ ಪರಿಶ್ರಮ ಇದೆ. ಬಹಳ ಸೊಗಸಾಗಿ ಗೌನ್‌ ವಿನ್ಯಾಸ ಮಾಡಿದ್ದಾರೆ. ಯಾವುದೋ ಕಾರಣಕ್ಕೆ ಅದನ್ನು ಮೂಲೆಗೆಸೆಯುವುದರಲ್ಲಿ ಅರ್ಥವಿಲ್ಲ. ಬದಲಿಗೆ ಅದಕ್ಕೊಂದು ಹೊಸ ರೂಪ ಕೊಡೋಣ. ಹಳೆ ನೆನಪುಗಳಿಂತಲೂ ಹೊಸ ಹೊಸ ನೆನಪುಗಳನ್ನು ಕಲೆ ಹಾಕೋಣ. ಹೊಸ ದಾರಿ ಹಿಡಿದು ನಡೆಯೋಣ. ಯಾವತ್ತೂ ಹೇಳುವುದಕ್ಕೆ ಹೊಸ ಕಥೆಗಳಿರಬೇಕು.’ ಎಂದಿದ್ದಾರೆ ಸಮಂತಾ.