ಸಾರಾಂಶ
ಕಿರಿಕ್ ಪಾರ್ಟಿಯ ನಟಿ ಸಂಯುಕ್ತಾ ಹೆಗ್ಡೆ ಅವರು ತಮ್ಮ ಪ್ರಪೋಸ್ ಕತೆಯನ್ನು ಹೇಳಿಕೊಂಡಿದ್ದಾರೆ.
ಸಿನಿವಾರ್ತೆ
ಸೋಷಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿರುವ ‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಇದೀಗ ವಿಶಿಷ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ತಮಗೆ ಸಿಕ್ಕ ಬೆಸ್ಟ್ ಪ್ರಪೋಸ್ ಕತೆಯನ್ನು ಹೇಳಿಕೊಂಡಿದ್ದಾರೆ. ಆ ಕತೆ ಹೀಗಿದೆ-
‘ನಾನೊಮ್ಮೆ ಶ್ರೀಲಂಕಾಗೆ ಹೋಗಿದ್ದೆ. ಅಲ್ಲಿ ಸ್ಕೂಬಾ ಡೈವ್ ಮಾಡುತ್ತಿದ್ದೆ. ಆ ವೇಳೆ ಸಮುದ್ರದ ನೀರಿನ ಆಳದಲ್ಲಿ ಆನಂದದಿಂದ ಇದ್ದಾಗ ಒಬ್ಬ ಹುಡುಗ ನನ್ನ ಬಳಿ ಬಂದ. ಅಲ್ಲಿಯೇ ನನಗೆ ‘ಐ ಲವ್ ಯೂ’ ಎಂದು ಪ್ರಪೋಸ್ ಮಾಡಿದ. ನೀರಿನ ಆಳದಲ್ಲಿ ನಿಂತು ಆತ ನನ್ನ ಪ್ರೀತಿಯನ್ನು ಹೇಳಿಕೊಂಡಿದ್ದು ನೋಡಿ ನಾನು ನಿಜಕ್ಕೂ ಥ್ರಿಲ್ಲಾದೆ. ತುಂಬಾ ಬ್ಯೂಟಿಫುಲ್ ಅನಿಸಿತು. ಆ ನಂತರ ಆತನನ್ನು ನಾನು ಭೇಟಿ ಮಾಡಿದೆ. ನನಗೆ ಪ್ರೀತಿ ಮೇಲೆ ನಂಬಿಕೆ ಇದೆ. ಆದರೆ, ಈಗ ಅದಕ್ಕೆಲ್ಲ ಸಮಯ ಇಲ್ಲ. ನಾನು ಲವ್ ಯೂ ಟೂ ಅಂತ ಹೇಳಕ್ಕೆ ಆಗಲ್ಲ’.
ಅವರ ಈ ಕತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ.