ಸಂಜು ವೆಡ್ಸ್‌ ಗೀತಾ 2 ಸಿನಿಮಾದಲ್ಲಿ ಮಂಗ್ಲಿ ಹಾಡಿಗೆ ರಾಗಿಣಿ ಡಾನ್ಸ್‌

| Published : Oct 11 2024, 11:50 PM IST

ಸಂಜು ವೆಡ್ಸ್‌ ಗೀತಾ 2 ಸಿನಿಮಾದಲ್ಲಿ ಮಂಗ್ಲಿ ಹಾಡಿಗೆ ರಾಗಿಣಿ ಡಾನ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂಜು ವೆಡ್ಸ್‌ ಗೀತಾ 2 ಸಿನಿಮಾ ಹಾಡಿಗೆ ರಾಗಿಣಿ ಮಾದಕ ಸ್ಟೆಪ್

‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ‘ಹಬೀಬಿ ಹಬೀಬಿ’ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಖ್ಯಾತ ದಕ್ಷಿಣ ಭಾರತೀಯ ಗಾಯಕಿ ಮಂಗ್ಲಿ ಹಾಡಿರುವ ಈ ಹಾಡಿಗೆ ರಾಗಿಣಿ ದ್ವಿವೇದಿ, ರಚಿತಾ ರಾಮ್‌ ಹೆಜ್ಜೆ ಹಾಕಿದ್ದಾರೆ.

ಈ ಕುರಿತು ನಿರ್ದೇಶಕ ನಾಗಶೇಖರ್‌, ‘ಇದು ಜನರನ್ನು ಸಿನಿಮಾದತ್ತ ಸೆಳೆಯುವ ಹಾಡು. ಭರ್ಜರಿ ಮನರಂಜನೆ ಹಾಡಿನಲ್ಲಿದೆ. ರಾಗಿಣಿ ಹಾಗೂ ನಾಯಕಿ ರಚಿತಾ ರಾಮ್‌ ಇಬ್ಬರೂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಆರ್ಗ್ಯಾನಿಕ್‌ ವೀಕ್ಷಣೆ ಸಿಗಲಿ ಎಂಬ ಉದ್ದೇಶದಿಂದ ಹೆಚ್ಚು ಪ್ರಚಾರ ಮಾಡಿಲ್ಲ. ಸದ್ಯ ಸಿನಿಮಾ ರೀರೆಕಾರ್ಡಿಂಗ್‌ ಹಂತದಲ್ಲಿದೆ. ಡಿಸೆಂಬರ್‌ 6ಕ್ಕೆ ರಿಲೀಸ್‌ ಮಾಡುವ ಸಾಧ್ಯತೆ ಇದೆ’ ಎಂದಿದ್ದಾರೆ.

ಈ ಹಾಡಿಗೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಇದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಹಾಡನ್ನು ಬಿಡುಗಡೆ ಮಾಡಿದರು. ಛಲವಾದಿ ಕುಮಾರ್‌ ನಿರ್ಮಾಪಕರು. ಶ್ರೀನಗರ ಕಿಟ್ಟಿ ನಾಯಕ, ರಚಿತಾ ರಾಮ್‌ ಚಿತ್ರದ ನಾಯಕಿ. ರಾಗಿಣಿ ದ್ವಿವೇದಿ ನೆಗೆಟಿವ್‌ ಶೇಡ್‌ನಲ್ಲಿ ನಟಿಸಿದ್ದಾರೆ.