ಸಾರಾಂಶ
ಕನ್ನಡದ ಬಹು ನಿರೀಕ್ಷೆಯ ಸಂಜು ವೆಡ್ಸ್ ಗೀತಾ 2 ಚಿತ್ರದ ಅದ್ದೂರಿ ಹಾಡೊಂದು ಚಿತ್ರೀಕರಣಗೊಂಡಿದೆ. ಒಂದೇ ಹಾಡಿಗೆ ಲಕ್ಷ ಲಕ್ಷಗಳ ವೆಚ್ಚದಲ್ಲಿ ವಿಶೇಷಲಾದ ಸೆಟ್ ನಿರ್ಮಿಸಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಸದ್ಯದಲ್ಲೇ ಈ ಹಾಡು ಬಿಡುಗಡೆ ಆಗಲಿದೆ.
ಕನ್ನಡಪ್ರಭ ಸಿನಿವಾರ್ತೆ
ಶ್ರೀನಗರ ಕಿಟ್ಚಿ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸುತ್ತಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಹಾಡೊಂದು 50 ಲಕ್ಷ ವೆಚ್ಚದಲ್ಲಿ ಚಿತ್ರೀಕರಣ ಮಾಡಲಾಗಿದೆ. ಕುಣಿಗಲ್‌ನ ಯುಬಿ ಕುದುರೆ ಫಾರಂನಲ್ಲಿ ಅದ್ದೂರಿಯಾಗಿ ಸೆಟ್ ನಿರ್ಮಿಸಿ ಐದು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ನಾಗಶೇಖರ್ ನಿರ್ದೇಶನದ ಈ ಚಿತ್ರವನ್ನು ಛಲವಾದಿ ಕುಮಾರ್ ನಿರ್ಮಿಸಿದ್ದಾರೆ.