ಸುದೀಪ್‌ ಮಗಳು ಸಾನ್ವಿ ನಟನೆಯ ವೀಡಿಯೋ ಟ್ರೆಂಡಿಂಗ್‌

| Published : Jun 21 2024, 01:04 AM IST / Updated: Jun 21 2024, 05:17 AM IST

ಸಾರಾಂಶ

ಸಾನ್ವಿ ಸುದೀಪ್‌ ನಟನೆಯ ವೀಡಿಯೋ ಟ್ರೆಂಡಿಂಗ್‌ನಲ್ಲಿದೆ. ಸುದೀಪ್‌ ಮಗಳ ನಟನೆಗೆ ಫ್ಯಾನ್ಸ್‌ ಶಹಭಾಸ್‌ ಅಂದಿದ್ದಾರೆ.

ಕಿಚ್ಚ ಸುದೀಪ್‌ ಮಗಳು ಸಾನ್ವಿ ಸುದೀಪ್‌ ತನ್ನ ನಟನೆಯ ವೀಡಿಯೋ ತುಣುಕನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಗನ್‌ ಹಿಡಿದು ಖದರ್‌ನಿಂದ ವಿಚಾರಣೆ ನಡೆಸೋ ಪಾತ್ರದಲ್ಲಿ ಸಾನ್ವಿಯ ಖಡಕ್‌ ನಟನೆಯನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

ದಕ್ಷಿಣ ಭಾರತದ ಪ್ರಸಿದ್ಧ ಅನ್ನಪೂರ್ಣ ಕಾಲೇಜ್‌ ಆಫ್‌ ಫಿಲ್ಮ್‌ ಆ್ಯಂಡ್‌ ಮೀಡಿಯಾ ಸಂಸ್ಥೆಯವರ್ಕ್‌ ಶಾಪ್‌ಗಾಗಿ ಮಾಡಿರುವ ವೀಡಿಯೋ ಇದಾಗಿದ್ದು, ಸಾನ್ವಿ ಖೈದಿಯ ವಿಚಾರಣೆ ನಡೆಸೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಮೂಲಕ ಈವರೆಗೆ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಸಾನ್ವಿ ಇದೀಗ ನಟನೆಯಲ್ಲೂ ಕಮ್ಮಿಯಿಲ್ಲ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.