ಸಾರಾಂಶ
ಸಾರಾಂಶ ಸಿನಿಮಾದ ನಟನೆಯಿಂದ ಗಮನಸೆಳೆದಿದ್ದ ದೀಪಕ್ ಸುಬ್ರಹ್ಮಣ್ಯ ಹೊಸ ಸಿನಿಮಾ ಮಿ.ರಾಣಿ
ಕನ್ನಡಪ್ರಭ ಸಿನಿವಾರ್ತೆ
‘ಸಾರಾಂಶ’ ಚಿತ್ರದ ನಾಯಕ ದೀಪಕ್ ಸುಬ್ರಹ್ಮಣ್ಯ ಅವರ ಹೊಸ ಸಿನಿಮಾ ‘ಮಿ. ರಾಣಿ’. ಈ ಹಿಂದೆ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾ ನಿರ್ದೇಶಿಸಿದ್ದ ಮಧುಚಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಕಮಲಹಾಸನ್ ಅವರಿಂದ ಟೈಟಲ್ ಲಾಂಚ್ ಎಂಬ ತಮಾಷೆಯ ವೀಡಿಯೋ ಮೂಲಕ ಈ ಸಿನಿಮಾದ ಶೀರ್ಷಿಕೆ ಅನಾವರಣವಾಗಿದೆ. ಪಾರ್ವತಿ ನಾಯರ್ ಚಿತ್ರದ ನಾಯಕಿ. ಶ್ರೀವತ್ಸ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ, ಆನಂದ್, ಚಕ್ರವರ್ತಿ ದಾವಣಗೆರೆ ತಾರಾಬಳಗದಲ್ಲಿದ್ದಾರೆ.
ಜೂಡಾ ಸ್ಯಾಂಡಿ ಸಂಗೀತ, ರವೀಂದ್ರನಾಥ್ ಟಿ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದೆ.
ಇದೊಂದು ಕ್ರೌಡ್ ಫಂಡೆಡ್ ಚಿತ್ರವಾಗಿದ್ದು 100ಕ್ಕೂ ಅಧಿಕ ಮಂದಿ ಸಿನಿಮಾಸಕ್ತರು ಬಂಡವಾಳ ಹೂಡಿದ್ದಾರೆ.