ಸಾರಾಂಶ
ಎಕ್ಸ್ ಆ್ಯಂಡ್ ವೈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಇದು ಸತ್ಯಪ್ರಕಾಶ್ ನಟನೆ, ನಿರ್ದೇಶನದ ಚಿತ್ರ.
ಡಿ.ಸತ್ಯಪ್ರಕಾಶ್ ನಿರ್ದೇಶನ, ನಟನೆಯ ‘ಎಕ್ಸ್ ಆ್ಯಂಡ್ ವೈ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಈ ಬಗ್ಗೆ ವಿವರ ನೀಡಿದ ಸತ್ಯಪ್ರಕಾಶ್, ‘ಇದು ಇಂದಿನ ಜನರೇಷನ್ ಕಥೆ. ಅಪ್ಪ-ಅಮ್ಮ ಆದವರ, ಆಗುತ್ತಿರುವವರ, ಆಗಬೇಕು ಎಂದುಕೊಂಡವರ ಕಥೆ. ಹಾಗೆಯೇ ಇವತ್ತಿನ ಹುಡುಗ-ಹುಡುಗಿಯರ, ಮಕ್ಕಳ ಕಥೆ. ಇದೊಂದು ಕಾಮಿಡಿ ಜಾನರ್ ಸಿನಿಮಾ. ಅತಿ ಸೂಕ್ಷ್ಮ ವಿಚಾರಗಳನ್ನು ಸರಳವಾಗಿ ನಿಮ್ಮ ಮುಂದೆ ತರುತ್ತಿದ್ದೇವೆ’ ಎಂದಿದ್ದಾರೆ.