ಸ್ಕ್ಯಾಮ್‌ 1770 ಇಂದು ತೆರೆಗೆ

| Published : Apr 12 2024, 01:00 AM IST / Updated: Apr 12 2024, 05:18 AM IST

ಸಾರಾಂಶ

ಶಿಕ್ಷಣ ಜಗತ್ತಿನ ವಿವಿಧ ಮುಖ ಪರಿಚಯಿಸುವ ನೈಜ ಘಟನೆ ಆಧರಿತ ಸಿನಿಮಾ ಸ್ಕ್ಯಾಮ್. ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಖ್ಯಾತಿಯ ರಂಜನ್‌ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಸತ್ಯ ಘಟನೆ ಆಧರಿತ, ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಚಿತ್ರ ‘ಸ್ಕ್ಯಾಮ್‌ 1770’ ಇಂದು ಬಿಡುಗಡೆ ಆಗುತ್ತಿದೆ. ವಿಕಾಸ್ ಪುಷ್ಪಗಿರಿ ನಿರ್ದೇಶನದ ಚಿತ್ರವಿದು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇಬೇಕಾದ ಚಿತ್ರವಿದು ಎಂದು ಚಿತ್ರತಂಡ ಹೇಳಿದೆ.

‘ಸಹಿಪ್ರಾ ಶಾಲೆ ಕಾಸರಗೋಡು’ ಸಿನಿಮಾ ಖ್ಯಾತಿಯ ರಂಜನ್ ನಾಯಕ. ನಿಶ್ವಿತಾ ನಾಯಕಿ. ಬಿ. ಸುರೇಶ್, ಅವಿನಾಶ್, ಶ್ರೀನಿವಾಸ ಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರ ಪಂಡಿತ್, ಶ್ರುತಿ ನಾಯಕ್ ನಟಿಸಿದ್ದಾರೆ. ದೇವರಾಜ್ ಆರ್ ಸಿನಿಮಾ ನಿರ್ಮಿಸಿದ್ದಾರೆ.