ಶಾಹಿದ್ ಕಪೂರ್‌ ಚಿತ್ರಕ್ಕೆ ಸಚಿನ್ ರವಿ ಆ್ಯಕ್ಷನ್‌ ಕಟ್‌

| Published : Mar 21 2024, 01:04 AM IST

ಶಾಹಿದ್ ಕಪೂರ್‌ ಚಿತ್ರಕ್ಕೆ ಸಚಿನ್ ರವಿ ಆ್ಯಕ್ಷನ್‌ ಕಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ನಿರ್ದೇಶಕ ಸಚಿನ್ ರವಿ ಅವರು ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆನಿರೀಕ್ಷಯಂತೆ ಸಚಿನ್‌ ರವಿ ನಿರ್ದೇಶನ ಹಾಗೂ ಶಾಹಿದ್‌ ಕಪೂರ್‌ ನಟನೆಯಲ್ಲಿ ‘ಅಶ್ವತ್ಥಾಮ’ ಸಿನಿಮಾ ಸೆಟ್ಟೇರುತ್ತಿದೆ. ಈ ಕುರಿತು ಅಧಿಕೃತವಾಗಿ ನಟ ಶಾಹಿದ್‌ ಕಪೂರ್‌ ಅವರು ಟ್ವೀಟ್‌ ಮಾಡಿದ್ದಾರೆ. ಮಹಾಭಾರತದ ವೀರನಾಗಿದ್ದ ಅಶ್ವತ್ಥಾಮ ಚಿರಂಜೀವಿ ಕೂಡ ಹೌದು. ಇದೇ ಚಿತ್ರವನ್ನು ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣ ಹಾಗೂ ಸಚಿನ್‌ ರವಿ ನಿರ್ದೇಶವನದಲ್ಲಿ ಕನ್ನಡದಲ್ಲೇ ಬರಬೇಕಿತ್ತು. ಆದರೆ, ಈಗ ಹಿಂದಿ ಮೂಲಕ ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಬರುತ್ತಿದೆ. ಹೌದು ಹಿಂದಿ ಜತೆಗೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಪೂಜಾ ಎಂಟರೈನಮೆಂಟ್ ಬ್ಯಾನರ್‌ ಮೂಲಕ ವಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಶಿಕಾ ದೇಶ್‌ಮುಖ್‌ ಅವರು ನಿರ್ಮಿಸುತ್ತಿದ್ದಾರೆ. ‘ಅಶ್ವತ್ಥಾಮನ ಕುರಿತ ಕತೆಯನ್ನು ಹೇಳುವ ನನ್ನ ಪ್ರಾಮಾಣಿಕ ಪ್ರಯತ್ನವನ್ನು ನಾನು ಮುಂದುವರಿಸುತ್ತಿದ್ದೇನೆ. ಉಳಿದಿದ್ದು ಕೃಷ್ಣನಿಗೆ ಬಿಡುತ್ತೇನೆ’ ಎಂದು ನಿರ್ದೇಶಕ ಸಚಿನ್‌ ರವಿ ಟ್ವೀಟ್‌ ಮಾಡಿದ್ದಾರೆ.