ಸಾರಾಂಶ
ಶರಣ್ ನಟನೆಯ ಅವತಾರ ಪುರುಷ ಮಾ.22ರಂದು ರಿಲೀಸ್.
ಕನ್ನಡಪ್ರಭ ಸಿನಿವಾರ್ತೆ
ಮಾ.22ರಂದು ಸಿಂಪಲ್ ಸುನಿ ನಟನೆಯ, ಶರಣ್ ಅಭಿನಯದ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆಯಾಗಲಿದೆ. ಐಪಿಎಲ್ ಮೊದಲ ಮ್ಯಾಚ್ ದಿನವೇ ಸಿನಿಮಾ ಬಿಡುಗಡೆಯಾಗಲಿದೆ. ಐಪಿಎಲ್ ಮ್ಯಾಚ್ ಶುರುವಾದರೆ ಥೇಟರ್‌ಗೆ ಜನ ಬರುವುದಿಲ್ಲ ಎಂದು ಹೆಚ್ಚಿನ ಸಿನಿಮಾಗಳನ್ನೆಲ್ಲ ಐಪಿಎಲ್‌ಗೂ ಮುನ್ನವೇ ತರಾತುರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಸುನಿ ಐಪಿಎಲ್‌ಗೆ ಅಂಜದೆ ತಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.ಈ ಚಿತ್ರದಲ್ಲಿ ಶರಣ್ ಜೊತೆಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್, ಭವ್ಯ, ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸೂಪರ್ ನ್ಯಾಚುರಲ್ ಕಾಮಿಡಿ ಥ್ರಿಲ್ಲರ್‌ನ ಮೊದಲ ಭಾಗವನ್ನು ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು.