ಶರಣರ ಶಕ್ತಿ ಚಿತ್ರದ ಹಾಡು ಬಿಡುಗಡೆ

| Published : May 10 2024, 01:32 AM IST / Updated: May 10 2024, 07:49 AM IST

Film theater

ಸಾರಾಂಶ

ಶರಣರ ಶಕ್ತಿ ಚಿತ್ರದ ಹಾಡು ಇತ್ತೀಚೆಗೆ ಬಿಡುಗಡೆ ಆಯಿತು. ಬಸವಣ್ಣನವರ ಕ್ರಾಂತಿಕಾರಿ ಹೆಜ್ಜೆ ಗುರುತುಗಳನ್ನು ತೋರುವ ಸಿನಿಮಾ ಇದು.

ಕ್ರಾಂತಿಕಾರಿ ಬಸವಣ್ಣನವರ ಹೆಜ್ಜೆ ಗುರುತುಗಳನ್ನು ಬಿಂಬಿಸುವ ‘ಶರಣರ ಶಕ್ತಿ’ ಚಿತ್ರದ ಹಾಡು ಬಿಡುಗಡೆ ಆಗಿದೆ. ಈ ಚಿತ್ರವನ್ನು ನಿರ್ದೇಶಿಸಿರುವುದು ದಿಲೀಪ್‌ ಶರ್ಮ. ಆರಾಧನಾ ಕುಲಕರ್ಣಿ ನಿರ್ಮಾಣ ಮಾಡುವ ಜತೆಗೆ ಅಕ್ಕ ನಾಗಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಅನುಭವ ಮಂಟಪದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದರು.

ದಿಲೀಪ್‌ ಶರ್ಮ, ‘ಬಸವಣ್ಣನವರ ಸಾಮಾಜಿಕ ಕ್ರಾಂತಿ ಬಹು ದೊಡ್ಡ ಇತಿಹಾಸ. ಅನುಭವ ಮಂಟಪ ಕಟ್ಟಿದ್ದು, ಶರಣರು ಜತೆಯಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಬಸವಣ್ಣವರ ಜೀವನ, ಶರಣರನ್ನು ನಿಯಂತ್ರಿಸಿದರೆ ಏನಾಗುತ್ತದೆ... ಇತ್ಯಾದಿ ಹಲವು ಅಂಗಳ ಸುತ್ತ ಸಿನಿಮಾ ಸಾಗುತ್ತದೆ. ಚಿತ್ರೀಕರಣ ಮುಗಿದಿದೆ’ ಎಂದರು. ಬಸವಣ್ಣನಾಗಿ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತ ಮಡ್ಲೂರು ಅಭಿನಯಿಸಿದ್ದಾರೆ.