ವೆಂಕ್ಯಾ ಸಿನಿಮಾದಲ್ಲಿ ಶಿಮ್ಲಾ ಬೆಡಗಿ ರೂಪಾಲಿ ಸೂದ್‌

| Published : Apr 05 2024, 01:00 AM IST / Updated: Apr 05 2024, 06:17 AM IST

ವೆಂಕ್ಯಾ ಸಿನಿಮಾದಲ್ಲಿ ಶಿಮ್ಲಾ ಬೆಡಗಿ ರೂಪಾಲಿ ಸೂದ್‌
Share this Article
  • FB
  • TW
  • Linkdin
  • Email

ಸಾರಾಂಶ

ವೆಂಕ್ಯಾ ಸಿನಿಮಾಗೆ ಶಿಮ್ಲಾದಿಂದ ಬಂದ ಬೆಡಗಿ ರೂಪಾಲಿ ಸೂದ್‌

 ಸಿನಿವಾರ್ತೆ

ಶಿಮ್ಲಾ ಮೂಲದ ನಟಿ ರೂಪಾಲಿ ಸೂದ್‌ ಸಾಗರ್ ಪುರಾಣಿಕ್ ನಟನೆ, ನಿರ್ದೇಶನದ ‘ವೆಂಕ್ಯಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರು ಮಾಡಿರುವ ರೂಪಾಲಿ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸಿದ್ದಾರೆ. ಹಾರ್ಡಿ ಸಂಧು ಜೊತೆಗಿನ ‘ಹಾರ್ನ್ ಬ್ಲೋ’ ಮ್ಯೂಸಿಕ್‌ ಆಲ್ಬಂನಲ್ಲಿ ಇವರ ಡ್ಯಾನ್ಸ್‌ಗೆ ಪ್ರಶಂಸೆ ವ್ಯಕ್ತವಾಗಿತ್ತು.

ಈ ಕುರಿತು ರೂಪಾಲಿ, ‘ಇತ್ತೀಚೆಗೆ ಮನಾಲಿಯ ಕೆಲಾಂಗ್‌ನಲ್ಲಿ ಪರ್ವತ ಶ್ರೇಣಿಗಳ ನಡುವೆ ನನ್ನ ಪಾತ್ರದ ಚಿತ್ರೀಕರಣ ನಡೆದಿದೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆಬದುಕಿಗೆ ಅದ್ಭುತ ಆರಂಭ’ ಎಂದಿದ್ದಾರೆ.

ಪವನ್ ಒಡೆಯರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಪಕರು. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀನಿಧಿ ಡಿಎಸ್ ಬರೆದಿದ್ದಾರೆ.