ಹೆಣ್ಣು ಮದುವೆಯ ಬಳಿಕ ನಾಯಕಿಯಾಗಬಾರದೇಕೇ : ಶ್ವೇತಾ ಶ್ರೀವಾತ್ಸವ್ ರೆಕ್ಕೆ ಇದ್ದರೆ ಸಾಕೆ ಕೃತಿ ಬಿಡುಗಡೆ

| Published : Oct 24 2024, 12:34 AM IST / Updated: Oct 24 2024, 05:05 AM IST

ಹೆಣ್ಣು ಮದುವೆಯ ಬಳಿಕ ನಾಯಕಿಯಾಗಬಾರದೇಕೇ : ಶ್ವೇತಾ ಶ್ರೀವಾತ್ಸವ್ ರೆಕ್ಕೆ ಇದ್ದರೆ ಸಾಕೆ ಕೃತಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ನಟಿ ಶ್ವೇತಾ ಶ್ರೀವಾತ್ಸವ್‌ ತನ್ನ ಸಿನಿ ಜರ್ನಿ ಬಗೆಗಿನ ರೆಕ್ಕೆ ಇದ್ದರೆ ಸಾಕೆ ಕೃತಿ ಬಿಡುಗಡೆ ಮಾಡಿದ್ದಾರೆ.

 ಸಿನಿವಾರ್ತೆ

‘ಮದುವೆ ಆದ ಹುಡುಗಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರೆ ಜನ ಸ್ವೀಕರಿಸೋದಿಲ್ಲ ಎಂಬ ಪೂರ್ವಾಗ್ರಹ ಎರಡು ದಶಕಗಳ ಹಿಂದೆ ನಾನು ನಟಿಸಲು ಆರಂಭಿಸಿದಾಗಲೂ ಇತ್ತು. ಈಗಲೂ ಇದೆ. ಅದಕ್ಕೆ ಕಾರಣ ಏನು? ಹೆಣ್ಣು ಸ್ವಾವಲಂಬಿ ಅಲ್ಲವೇ? ಏನಾದರೂ ಸಾಧಿಸಬೇಕು ಎಂದರೆ ಆಕೆ ಗಂಡ ಅಥವಾ ತಂದೆಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳಬೇಕೆ?’ ಎಂದು ನಟಿ ಶ್ವೇತಾ ಶ್ರೀವಾತ್ಸವ್‌ ಪ್ರಶ್ನಿಸಿದ್ದಾರೆ. 

ಶ್ವೇತಾ ತನ್ನ ಸಿನಿಮಾರಂಗದ 20 ವರ್ಷಗಳ ಅನುಭವ ಕಥನ ‘ರೆಕ್ಕೆ ಇದ್ದರೆ ಸಾಕೆ’ ಕೃತಿಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಇಪ್ಪತ್ತು ವರ್ಷಗಳ ನನ್ನ ಸಿನಿಬದುಕನ್ನು ಸಾಧನೆ ಅಂತ ನಾನು ಕರೆದುಕೊಳ್ಳುತ್ತೇನೆ. ಈ ಸಮಯದಲ್ಲಿ ನಾನು ಎದುರಿಸಿದ ಸವಾಲುಗಳು, ಸನ್ನಿವೇಶಗಳು ಹಾಗೂ ಸಂತೋಷದ ವಿಚಾರಗಳು ಎಲ್ಲವನ್ನೂ ಈ ಪುಸ್ತಕದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಭಾರತ ಸೇರಿದಂತೆ ಹದಿನೈದು ದೇಶಗಳಲ್ಲಿ ಈ ಕೃತಿ ದೊರೆಯಲಿದೆ’ ಎಂದರು.