ಸಿಂಹ ಗುಹೆ ಚಿತ್ರದ ಆಡಿಯೋ ಬಿಡುಗಡೆ

| Published : Mar 29 2024, 12:46 AM IST

ಸಿಂಹ ಗುಹೆ ಚಿತ್ರದ ಆಡಿಯೋ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಹ ಗುಹೆ ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಆಗಿದೆ. ಇದು ಪ್ರೇಮ ಕತೆಯ ಸಿನಿಮಾ.

ಕನ್ನಡಪ್ರಭ ಸಿನಿವಾರ್ತೆ

‘ಸಮರ್ಥ’ ಹಾಗೂ ‘ತಾಜಾ’ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್‌ಜಿಆರ್ ನಿರ್ದೇಶನದ ‘ಸಿಂಹ ಗುಹೆ’ ಚಿತ್ರದ ಆಡಿಯೋವನ್ನು ಇತ್ತೀಚೆಗೆ ಅನಿರುದ್ಧ್‌ ಹಾಗೂ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಬಿಡುಗಡೆ ಮಾಡಿದರು.

ರವಿ ಶಿರೂರು, ನಿವಿಶ್ಕಾ ಪಾಟೀಲ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇದು. ನಿರ್ದೇಶಕ ಎಸ್‌ಜಿಆರ್ ಮಾತನಾಡಿ, ‘ಇದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಕತೆಯ ಸಿನಿಮಾ. ಸಿಂಹ ಗುಹೆ ಎಂಬ ಮನೆಯಲ್ಲಿ ಕತೆ ನಡೆಯುತ್ತದೆ. ಚಿತ್ರೀಕರಣ ಮುಗಿದ್ದು, ಬಿಡುಗಡೆ ಹಂತಕ್ಕೆ ಬಂದಿದೆ’ ಎಂದರು. ರವಿ ಶಿರೂರ್‌ ಮಾತನಾಡಿ ‘ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ಹಳ್ಳಿಯಲ್ಲಿ ಟ್ಯಾಂಕರ್ ಓಡಿಸಿಕೊಂಡಿರುವ ಹುಡುಗನ ಪಾತ್ರ ನನ್ನದು. ಆ ಹಳ್ಳಿಯಲ್ಲಿ ಕೊಲೆ ನಡೆದಾಗ ಅದು ಈ ಹುಡುಗನನ್ನು ಎಲ್ಲೆಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದು ಚಿತ್ರದ ಕತೆ’ ಎಂದು ಹೇಳಿದರು.

ನಾಯಕಿಯರಾದ ನಿವಿಶ್ಕಾ ಪಾಟೀಲ್, ಅನುರಾಧಾ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್, ಸಾಹಿತಿ ಶಿವನಂಜೇಗೌಡ ಹಾಜರಿದ್ದರು. ಎಸಿ ಮಹೇಂದರ್‌ ಕ್ಯಾಮೆರಾ, ಸತೀಶ್ ಆರ್ಯನ್ ಸಂಗೀತ ಇದೆ.