ಸೆ.9ಕ್ಕೆ ಸು ಫ್ರಮ್ ಸೋ ಓಟಿಟಿ ಸ್ಟ್ರೀಮಿಂಗ್

| N/A | Published : Sep 08 2025, 12:27 PM IST

Su from SO
ಸೆ.9ಕ್ಕೆ ಸು ಫ್ರಮ್ ಸೋ ಓಟಿಟಿ ಸ್ಟ್ರೀಮಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

‘ಸು ಫ್ರಮ್ ಸೋ’ ಸಿನಿಮಾ ಸೆಪ್ಟೆಂಬರ್ 9ರಿಂದ ಜಿಯೋ ಹಾಟ್​ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಜುಲೈ 25ರಂದು ಬಿಡುಗಡೆಯಾದ ಈ ಚಿತ್ರ ಇದೀಗ ಯಶಸ್ವಿ 45 ದಿನಗಳ ಪ್ರದರ್ಶನ ಪೂರ್ಣಗೊಳಿಸಿದೆ

 ಸಿನಿವಾರ್ತೆ

‘ಸು ಫ್ರಮ್ ಸೋ’ ಸಿನಿಮಾ ಸೆಪ್ಟೆಂಬರ್ 9ರಿಂದ ಜಿಯೋ ಹಾಟ್​ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಜುಲೈ 25ರಂದು ಬಿಡುಗಡೆಯಾದ ಈ ಚಿತ್ರ ಇದೀಗ ಯಶಸ್ವಿ 45 ದಿನಗಳ ಪ್ರದರ್ಶನ ಪೂರ್ಣಗೊಳಿಸಿದೆ. ವಿಶೇಷ ಅಂದರೆ ಸಿನಿಮಾ ರಿಲೀಸ್ ಆದ ಒಂದೂವರೆ ತಿಂಗಳ ಬಳಿಕವೂ ಈ ವೀಕೆಂಡ್‌ನಲ್ಲಿ ಹಲವೆಡೆ ತುಂಬಿದ ಗೃಹದ ಪ್ರದರ್ಶನ ಕಂಡಿದೆ.

ಗಳಿಕೆಯಲ್ಲಿ ಬರ ಅನುಭವಿಸುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಕಲೆಕ್ಷನ್‌ನ ಸುರಿಮಳೆ ಸುರಿಸಿ ಚೈತನ್ಯ ತಂದ ಈ ಚಿತ್ರ ಪರಭಾಷೆಗಳಲ್ಲೂ ಉತ್ತಮ ಪ್ರದರ್ಶನ ಕಂಡಿದೆ.

ಆದರೆ ಇದೀಗ 50 ದಿನ ಪೂರ್ಣಗೊಳಿಸಲು ಮೂರು ದಿನ ಬಾಕಿ ಇರುವಾಗಲೇ ಓಟಿಟಿಗೆ ಬಂದಿದೆ. ಈವರೆಗೆ ಚಿತ್ರ ಒಟ್ಟಾರೆ 122 ಕೋಟಿ ರು.ಗಳಷ್ಟು ಕಲೆಕ್ಷನ್್‌ ಮಾಡಿದೆ ಎನ್ನಲಾಗಿದೆ.

Read more Articles on