ಸಾರಾಂಶ
ಆರ್ಮುಗ ರವಿಶಂಕರ್ ನಿರ್ದೇಶನದ 'ಸುಬ್ರಹ್ಮಣ್ಯ' ಚಿತ್ರದಲ್ಲಿ ಅವರ ಪುತ್ರ ಅದ್ವೆ ನಟಿಸುತ್ತಿದ್ದಾರೆ. ಈ ಫ್ಯಾಂಟಸಿ ಅಡ್ವೆಂಚರ್ ಸಿನಿಮಾದ ಪ್ರೀ ಲುಕ್ ಬಿಡುಗಡೆಯಾಗಿದ್ದು, ಪಾಳು ಬಿದ್ದಿರುವ ದೇಗುಲದ ಮುಂದೆ ನಾಯಕ ಅದ್ವೆ ಕೈಯಲ್ಲಿ ಪಂಜು ಹಿಡಿದು ಕಾಣಿಸಿಕೊಂಡಿದ್ದಾರೆ.
ಸಿನಿವಾರ್ತೆ
ಆರ್ಮುಗ ರವಿಶಂಕರ್ ನಿರ್ದೇಶನದಲ್ಲಿ ಅವರ ಪುತ್ರ ಅದ್ವೆ ನಟಿಸುತ್ತಿರುವ ‘ಸುಬ್ರಹ್ಮಣ್ಯ’ ಸಿನಿಮಾದ ಪ್ರೀ ಲುಕ್ ಬಿಡುಗಡೆಯಾಗಿದೆ. ಇದೊಂದು ಫ್ಯಾಂಟಸಿ ಅಡ್ವೆಂಚರ್ ಸಿನಿಮಾವಾಗಿದ್ದು, ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಈ ಸಿನಿಮಾದ ಪ್ರೀಲುಕ್ ಬಿಡುಗಡೆಯಾಗಿದ್ದು, ಪಾಳು ಬಿದ್ದಿರುವ ದೇಗುಲದ ಮುಂದೆ ನಾಯಕ ಅದ್ವೆ ಕೈಯಲ್ಲಿ ಪಂಜು ಹಿಡಿದು ಬ್ಯಾಕ್ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪ್ಯಾನ್ ಇಂಡಿಯಾ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತ ತಲುಪಿದೆ.