ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್‌ ಕೊಡುವುದರಲ್ಲಿ ಅರ್ಥವಿಲ್ಲ: ಕಿಚ್ಚ ಸುದೀಪ್‌

| Published : Feb 09 2024, 01:51 AM IST / Updated: Feb 09 2024, 12:55 PM IST

Kiccha Sudeep BJP
ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್‌ ಕೊಡುವುದರಲ್ಲಿ ಅರ್ಥವಿಲ್ಲ: ಕಿಚ್ಚ ಸುದೀಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್ ಕೊಡಲ್ಲ ಅಂತಿದ್ದಾರೆ ಕಿಚ್ಚ ಸುದೀಪ್‌

ಕನ್ನಡಪ್ರಭ ಸಿನಿವಾರ್ತೆ

ಮ್ಯಾಕ್ಸ್‌ ಸಿನಿಮಾದ ಅಪ್​ಡೇಟ್ಸ್​ ಬಗ್ಗೆ ಅನೇಕರು ಟ್ವೀಟ್​ ಮಾಡುವುದನ್ನು ನೋಡಲು ಮಜಾ ಅನಿಸುತ್ತದೆ. ಆದರೆ ಬಿಡುಗಡೆ ಆಗುತ್ತಿರುವ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆ ಮಾಡಲಾಗಲೀ, ಬೇರೆ ನಟರ ಜೊತೆ ಪೈಪೋಟಿಗೆ ಬಿದ್ದಾಗಲೀ ನಮ್ಮ ಸಿನಿಮಾದ ಅಪ್​ಡೇಟ್ಸ್​ ಕೊಡುವುದರಲ್ಲಿ ಅರ್ಥವಿಲ್ಲ. 

ಚಿತ್ರತಂಡದಿಂದ ಪೂರ್ಣವಾಗಿ ಏನನ್ನಾದರೂ ಅನೌನ್ಸ್​ ಮಾಡಬೇಕು ಎಂದಾಗ ಅಪ್​ಡೇಟ್ಸ್​ ನೀಡಲಾಗುವುದು’ ಎಂದು ಸುದೀಪ್​ ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ ಸುದೀಪ್‌ ನಟನೆಯ ‘ಮ್ಯಾಕ್ಸ್‌’ ಸಿನಿಮಾ ಅಪ್‌ಡೇಟ್ಸ್‌ಗೆ ಸಂಬಂಧಿಸಿ ಕೆಲವರು ವ್ಯಂಗ್ಯ ಮಾಡುತ್ತಿರುವುದಕ್ಕೆ ಸುದೀಪ್‌ ಈ ರೀತಿ ತಿರುಗೇಟು ನೀಡಿದ್ದಾರೆ.

 ‘ನನ್ನ ಕೆಲಸದ ಬಗ್ಗೆ ನೀವೆಲ್ಲರೂ ತೋರಿಸಿದ ಆಸಕ್ತಿ ಬಗ್ಗೆ ಮೆಚ್ಚುಗೆ ಇದೆ. ಆದರೆ ಬಿಗ್‌ ಬಾಸ್ ಬಗ್ಗೆ ಮತ್ತು ಸಿಸಿಎಲ್​ ಬಗ್ಗೆ ನೀವು ವ್ಯಂಗ್ಯ ಮಾಡಿದರೆ ಅದು ಸಿನಿಮಾದ ಬಗೆಗಿನ ನಿಮ್ಮ ಆಸಕ್ತಿಯನ್ನು ಬಿಂಬಿಸಿದಂತೆ ಆಗುವುದಿಲ್ಲ. 

ಮ್ಯಾಕ್ಸ್​ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ನಿಮ್ಮನ್ನು ಮನರಂಜಿಸುವುದೇ ನಮ್ಮ ಮೊದಲು ಆದ್ಯತೆ. ಈ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದೂ ಈ ವೇಳೆ ಸುದೀಪ್‌ ತಿಳಿಸಿದ್ದಾರೆ.