ಸಾರಾಂಶ
ಸಪ್ಲೆಯರ್ ಶಂಕರ ಸಿನಿಮಾ ಫೆ.2ಕ್ಕೆ ಬಿಡುಗಡೆ.
ಕನ್ನಡಪ್ರಭ ಸಿನಿವಾರ್ತೆ
ನಿಶ್ಚಿತ್ ಕೊರೋಡಿ ನಟನೆಯ ‘ಸಪ್ಲೈಯರ್ ಶಂಕರ’ ಸಿನಿಮಾ ಫೆ.2ಕ್ಕೆ ತೆರೆ ಕಾಣಲಿದೆ. ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಸಿನಿಮಾದ ಟೀಸರ್, ಪೋಸ್ಟರ್ ಬಿಡುಗಡೆಯಾಗಿದೆ. ರಂಜಿತ್ ನಿರ್ದೇಶನದ ಚಿತ್ರವನ್ನು ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿದ್ದಾರೆ. ಬಾರ್ ಸಪ್ಲೈಯರ್ ಸುತ್ತ ನಡೆಯುವ ಈ ಮರ್ಡರ್ ಮಿಸ್ಟರಿಗೆ ದೀಪಿಕಾ ಆರಾಧ್ಯ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ನಟಿಸಿದ್ದಾರೆ..