ಸಾರಾಂಶ
ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಸೂರಿ ಲವ್ಸ್ ಸಂಧ್ಯಾ ಸಿನಿಮಾ ಇತ್ತೀಚೆಗೆ ದುಬೈನಲ್ಲಿ ಪ್ರೀಮಿಯರ್ ಶೋ ನಡೆಯಿತು.
ಕನ್ನಡಪ್ರಭ ಸಿನಿವಾರ್ತೆ
ಅಭಿಮನ್ಯು ಕಾಶಿನಾಥ್ ಅಭಿನಯದ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಪ್ರೀಮಿಯರ್ ಶೋ ದುಬೈನಲ್ಲಿ ನಡೆದಿದೆ. ಉಪೇಂದ್ರ, ಪ್ರಿಯಾಂಕ ಉಪೇಂದ್ರ, ವಿಧಾನ ಪರಿಷತ್ ಸದಸ್ಯ ಶರವಣ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರದ ಪ್ರೀಮಿಯರ್ ಶೋ ನಂತರ ಮಾತನಾಡಿದ ಉಪೇಂದ್ರ, ‘ನನ್ನ ಗುರುಗಳ ಮಗ ಅಭಿಮನ್ಯು ಉತ್ತಮ ನಟ ಅಂತ ತಿಳಿದಿರಲಿಲ್ಲ. ಈ ಚಿತ್ರ ನೋಡಿದ ಮೇಲೆ ಗೊತ್ತಾಯಿತು. ಕ್ಲೈಮಾಕ್ಸ್‌ನಲ್ಲಿ ಅದ್ಭುತವಾಗಿ ನಟಿಸಿದ್ದಾನೆ. ಚಿತ್ರದ ರ್ಮಾಪಕ ಮಂಜುನಾಥ್ ಅವರನ್ನು ನೋಡಿದರೆ ದ್ವಾರಕೀಶ್ ನೆನಪಿಗೆ ಬರುತ್ತಾರೆ. ಅವರು 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸಿನಿಮಾಗಾಗಿ ಸಾಕಷ್ಟು ಸಾಹಸಗಳನ್ನು ಮಾಡಿದವರು ದ್ವಾರಕೀಶ್. ನೀವು ಕೂಡ ನಿಮ್ಮ ಸಿನಿಮಾ ಬಿಡುಗಡೆಗೂ ಮುನ್ನವೇ ದುಬೈನಲ್ಲಿ ಪ್ರೀಮಿಯರ್ ಶೋ ಹಾಕಿದ್ದೀರಿ. ಇದೂ ಕೂಡ ಸಾಹಸವೇ. ಹೀಗಾಗಿ ನೀವೂ ಕೂಡ ದ್ವಾರಕೀಶ್ ಅವರಂತೆಯೇ ಸಾಹಸ ನಿರ್ಮಾಪಕರಾಗಿ’ ಎಂದರು. ಯಾದವ್ ರಾಜ್ ನಿರ್ದೇಶನದ, ಕೆ ಟಿ ಮಂಜುನಾಥ್ ನಿರ್ಮಾಣದ ಈ ಚಿತ್ರದಲ್ಲಿ ಅಪೂರ್ವ ನಾಯಕಿ, ಪ್ರತಾಪ್ ನಾರಾಯಣ್ ವಿಲನ್ ಆಗಿ ನಟಿಸಿದ್ದಾರೆ.
ಜಯರಾಮಣ್ಣ, ಮುಂಬೈನ ಪ್ರದೀಪ್ ಕಬ್ರಾ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲ ನಟಿಸಿದ್ದಾರೆ. ಹಾಡುಗಳಿಗೆ ಚೆನ್ನೈನ ಎಸ್.ಎನ್.ಅರುಣಗಿರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಅಲ್ಲಿಕ.ಜೆ.ವಿ.ಎಸ್.ಬಿ.ಎಲ್ ಶ್ರೀನಿವಾಸ್, ಸಂಕಲನ ಉಜ್ವಲ್‌ಗೌಡ, ನೃತ್ಯ ರಾಜ್‌ಕಿಶೋರ್, ಸಾಹಸ ದಿನೇಶ್‌ಕಾಶಿ, ಹಿನ್ನಲೆ ಶಬ್ದ ಲಿಯಾಂಡರ್ ಲೀ ಮಾರ್ಟಿ ಅವರದಾಗಿದೆ. ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ಡಿಸೇಂಬರ್ ತಿಂಗಳಲ್ಲಿ ಅದ್ದೂರಿಯಾಗಿ ಸಿನಿಮಾ ತೆರೆಗೆ ಬರಲಿದೆ.