ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಡಾರ್ಕ್ ಸ್ಟೋರ್‌ಗಳಲ್ಲಿ ಅವಧಿ ಮುಗಿದ ಆಹಾರ ಪದಾರ್ಥ, ಅನಧಿಕೃತ ಲೇಬಲಿಂಗ್‌, ಪರವಾನಗಿ ಇಲ್ಲದೆ ಔಷಧ ಮಾರಾಟದಂತಹ ವ್ಯಾಪಕ ನಿಯಮ ಉಲ್ಲಂಘನೆ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಡಾರ್ಕ್ ಸ್ಟೋರ್‌ಗಳಲ್ಲಿ ಅವಧಿ ಮುಗಿದ ಆಹಾರ ಪದಾರ್ಥ, ಅನಧಿಕೃತ ಲೇಬಲಿಂಗ್‌, ಪರವಾನಗಿ ಇಲ್ಲದೆ ಔಷಧ ಮಾರಾಟದಂತಹ ವ್ಯಾಪಕ ನಿಯಮ ಉಲ್ಲಂಘನೆ ಪತ್ತೆಯಾಗಿದೆ.

ಹೀಗಾಗಿ ಹೊಸಕೋಟೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ದಾಸ್ತಾನು ಮಳಿಗೆಗೆ ಬೀಗ ಜಡಿದಿದ್ದು, ಅಮೆಜಾನ್‌, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗಳಲ್ಲಿ ತಪ್ಪು ಲೇಬಲಿಂಗ್‌, ಅವಧಿ ಮೀರಿದ ಆಹಾರ ಪದಾರ್ಥ, ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ ಔಷಧ ಸೇರಿ 1.42 ಕೋಟಿ ರು. ಮೌಲ್ಯದ ವಸ್ತುಗಳ ಜಪ್ತಿ ಮಾಡಲಾಗಿದೆ.

ಕಳೆದೊಂದು ತಿಂಗಳಲ್ಲಿ 3 ಕೋಟಿ ರು.ಗಳಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನೂ ಕೋಟ್ಯಂತರ ರು. ಮೌಲ್ಯದಷ್ಟು ವಸ್ತುಗಳ ಮೂಲ ಗುಣಮಟ್ಟದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯು.ಟಿ.ಖಾದರ್, ಆಹಾರ, ಔಷಧ ಕ್ಷೇತ್ರದ ಅಕ್ರಮ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ದೇವನಹಳ್ಳಿಯ ಡಿಫೆನ್ಸ್ ಪಾರ್ಕ್ ಬಳಿಯ ಅಮೆಜಾನ್ ಸೆಂಟರ್‌ನಲ್ಲೂ ಉಲ್ಲಂಘನೆ ಕಂಡು ಬಂದಿದೆ. ಅನುಗುಣವಾಗಿರದ ತಪ್ಪು ಹಾಗೂ ಅಸಮರ್ಪಕ ಲೇಬಲಿಂಗ್ ಹೊಂದಿರುವ 20 ಲಕ್ಷ ರು. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸಮರ್ಪಕ ಲೇಬಲಿಂಗ್‌ ಸಂಬಂಧ 14 ಲಕ್ಷ ರು. ಮೌಲ್ಯದ ಹಾಗೂ ಅವಧಿ ಮೀರಿದ 6 ಲಕ್ಷ ರು. ಮೌಲ್ಯದ ಆಹಾರ ಉತ್ಪನ್ನ ಇದರಲ್ಲಿದೆ. ಜತೆಗೆ, ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ 2.45 ಲಕ್ಷ ರು. ಮೌಲ್ಯದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆನೇಕಲ್‌ನ ತಟ್ಟಿಹಳ್ಳಿ, ಮಡಿವಾಳ ಬಳಿಯ ಅಮೆಜಾನ್ ಸೆಂಟರ್‌ನಿಂದ ಒಟ್ಟು 32 ಲಕ್ಷ ರು. ಮೌಲ್ಯದ ಪದಾರ್ಥ ಸೀಜ್‌ ಮಾಡಲಾಗಿದೆ ಎಂದು ಹೇಳಿದರು.-ಬಾಕ್ಸ್-

ಪೆಪ್‌ಟೈಡ್ ಪಾರ್ಟಿ ಮೂಲ ಕಾರಣ

ಈಚೆಗೆ ಕೋರಮಂಗಲದಲ್ಲಿ ಪೆಪ್‌ಟೈಡ್ ಪಾರ್ಟಿ ಆಯೋಜನೆಗೊಂಡು ರದ್ದಾಗಿತ್ತು. ಈ ಬಗ್ಗೆ ತನಿಖೆ ವೇಳೆ ಆನ್‌ಲೈನ್‌ನಲ್ಲಿ ಔಷಧ ಮಾರಾಟ ವಿಚಾರ ಬೆಳಕಿಗೆ ಬಂದಿದೆ. ಇದರ ಬೆನ್ನತ್ತಿ ಹೋದಾಗ ಮೆಸರ್ಸ್ ಅಮೆಜಾನ್, ಇನ್‌ಸ್ಟಾಮಾರ್ಟ್, ಸಪ್ನಾ ಬಜಾರ್ ಹಾಗೂ ಲಿಯೋ 7 ಎಂಟರ್‌ಪ್ರೈಸಸ್ ಮತ್ತಿತರ ಕಡೆ ಪರವಾನಗಿ ಇಲ್ಲದೆ ಇ-ಕಾಮರ್ಸ್, ಡಾರ್ಕ್ ಸ್ಟೋರ್‌ಗಳಲ್ಲಿ ಔಷಧ ಪತ್ತೆಯಾಗಿವೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.

ಕಳೆದೊಂದು ತಿಂಗಳಿಂದ ಸತತವಾಗಿ

ಆಹಾರ ಇಲಾಖೆಯಿಂದ ದಾಳಿ: ಖಾದರ್‌

-3 ಕೋಟಿ ರು.ಮೌಲ್ಯದ ಆಹಾರ ಪದಾರ್ಥ ಜಪ್ತಿಬೆಂಗಳೂರು: ಕಳಪೆ ಔಷಧ, ಮರು ಲೇಬಲಿಂಗ್, ಅಸುರಕ್ಷಿತ ಆಹಾರ ಪ್ರಕರಣಗಳನ್ನು ಕ್ರಿಮಿನಲ್ ಕಾನೂನು ವ್ಯಾಪ್ತಿಗೆ ತಂದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುವ ಜಾಲವನ್ನು ಹತ್ತಿಕ್ಕಲು ಸರ್ಕಾರದ ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.

ಆರೋಗ್ಯಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದೊಂದು ತಿಂಗಳಿಂದ ಸತತವಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಿರಂತರವಾಗಿ ದಾಳಿ ನಡೆಸಿ ಕಳಪೆ, ಪರವಾನಗಿ ಇಲ್ಲದ ಔಷಧ ಪ್ರಕರಣಗಳಂತಹ ಅಕ್ರಮ ಬಯಲು ಮಾಡುತ್ತಿದೆ. ಆದರೆ, ಇಂತಹ ಪ್ರಕರಣಗಳನ್ನು ಬೇರುಸಹಿತ ಕಿತ್ತುಹಾಕಲು ಪ್ರತ್ಯೇಕ ಕಾನೂನು, ಕ್ರಿಮಿನಲ್ ಕಾಯಿದೆಯಡಿ ತಂದು ಕ್ರಮ ವಹಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಅಕ್ರಮ ನಡೆಸುವವರ ವಹಿವಾಟಿನ ಪರವಾನಗಿ ಶಾಶ್ವತವಾಗಿ ರದ್ದುಪಡಿಸುವ ಮತ್ತು ಅವರ ವಿರುದ್ಧ ನೇರ ಶಿಕ್ಷಾತ್ಮಕ ಕ್ರಮ ಜರುಗಿಸುವ ಪೂರ್ಣ ಅಕಾರವನ್ನು ರಾಜ್ಯ ಸರಕಾರಗಳಿಗೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವರನ್ನು ಶೀಘ್ರ ಭೇಟಿ ಮಾಡಿ ಸಮಾಲೋಚಿಸಲಾಗುವುದು. ರಾಜ್ಯ ಕಾನೂನು ಇಲಾಖೆ ಜತೆಗೂ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಕಳೆದೊಂದು ತಿಂಗಳಲ್ಲಿ ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಹಾಗೂ ಡಾರ್ಕ್ ಸ್ಟೋರ್ ಅಂದರೆ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಸ್ಥಳಗಳ ಮೇಲೆ ಇಲಾಖೆ ದಾಳಿ ನಡೆಸಿದ ವೇಳೆ ಅವ ಮುಗಿದ ಔಷಧ, ಮರು ಲೇಬಲಿಂಗ್‌ಗೆ (ತಪ್ಪು ಲೇಬಲ್) ಸಂಬಂಧ 3 ಕೋಟಿ ರು.ಮೌಲ್ಯದ ಔಷಧ ಮತ್ತು ಆಹಾರ ಪದಾರ್ಥ ಜಪ್ತಿ ಮಾಡಲಾಗಿದೆ. ಪರವಾನಗಿ ಇಲ್ಲದ ಆವರಣದಲ್ಲಿ ಇ-ಕಾಮರ್ಸ್, ಡಾರ್ಕ್ ಸ್ಟೋರ್‌ಗಳಲ್ಲಿ ಕೋಟ್ಯಂತರ ರು. ಮೌಲ್ಯದ ಔಷಧ, ಆಹಾರ ಪದಾರ್ಥಗಳು ಪತ್ತೆಯಾಗುತ್ತಿವೆ. ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಇದು ಅತ್ಯಂತ ಆಘಾತಕಾರಿ ವಿಚಾರ ಎಂದು ಕಳವಳ ವ್ಯಕ್ತಪಡಿಸಿದರು.