ಇಂದೇ ರಿಲೀಸ್‌ : ''''''''''''''''Switch { case n:''''''''''''''''

| Published : May 17 2024, 12:31 AM IST

ಸಾರಾಂಶ

ಐಟಿ ಜಗತ್ತಿನ ತಲ್ಲಣಗಳ ಕುರಿತ Switch { case n: ಸಿನಿಮಾ ಇಂದು ರಿಲೀಸ್ ಆಗ್ತಿದೆ.

ಪ್ರೋಗ್ರಾಮಿಂಗ್‌ ಸಂಜ್ಞೆಯಲ್ಲಿರುವ ಈ ಸಿನಿಮಾದ ಟೈಟಲ್ಲೇ ಒಂದಿಷ್ಟು ಕಥೆ ಹೇಳುತ್ತದೆ. ಈ ಕನ್ನಡ ಸಿನಿಮಾದ ನಿರ್ದೇಶಕ ಐಟಿ ಕ್ಷೇತ್ರದ ಚೇತನ್ ಶೆಟ್ಟಿ. ತನ್ನ ಐಟಿ ಉದ್ಯಮದ ಅನುಭವಗಳನ್ನು ''''''''''''''''Switch { case n:'''''''''''''''' ಎಂಬ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಶೀರ್ಷಿಕೆಯಲ್ಲಿರುವ ‘ಸ್ವಿಚ್‌’ ಅನ್ನೋದು ಕಂಪನಿಯಿಂದ ಕಂಪನಿಗೆ ಹಾರುವ ಐಟಿಯವರ ವೃತ್ತಿಪರ ಮಹತ್ವಾಕಾಂಕ್ಷೆಗೆ ಕನ್ನಡಿ ಹಿಡಿಯುತ್ತದೆ. ಉಳಿದ ಭಾಗದ ವಿವರ ಸಿನಿಮಾ ನೋಡಿದರಷ್ಟೇ ಗೊತ್ತಾಗುತ್ತದೆ. ಐಟಿ ಜಗತ್ತನ್ನು ನೈಜವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಚೇತನ್‌ ಶೆಟ್ಟಿ ಮಾಡಿದ್ದಾರೆ.

ವಿಜಯ್‌ ಸೂರ್ಯ, ಶ್ವೇತಾ ವಿಜಯ್‌ಕುಮಾರ್‌, ಪೃಥ್ವಿರಾಜ್‌ ಮೊದಲಾದವರು ನಟಿಸಿದ್ದಾರೆ. ಬೇಬಿ ಶೆಟ್ಟಿ, ಕೇಮಂತ್‌ ರೆಡ್ಡಿ ನಿರ್ಮಾಪಕರು.