ಸಾರಾಂಶ
ನೈಜ ಘಟನೆಯಾಧಾರಿತ ‘ತಾಜ್’ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆ ಆಗಿವೆ.
ಸಿನಿವಾರ್ತೆ
ನೈಜ ಘಟನೆಯಾಧಾರಿತ ‘ತಾಜ್’ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆ ಆಗಿವೆ. ಲಕ್ಷ್ಮೀ ಷಣ್ಮುಖ ನಿರ್ಮಾಣದ, ಬಿ ರಾಜರತ್ನ ನಿರ್ದೇಶನದ ಈ ಚಿತ್ರದಲ್ಲಿ ಷಣ್ಮುಖ ಜೈ ನಾಯಕನಾಗಿ, ಅಪ್ಸರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಬಿ ರಾಜರತ್ನ, ‘ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ. ಹಿಂದೂ- ಮುಸ್ಲಿಂ ಜೋಡಿಯ ಪ್ರೇಮಕತೆ ಸಿನಿಮಾದಲ್ಲಿದೆ’ ಎಂದರು.
ಈ ಚಿತ್ರದ ನಾಯಕಿ ಅಪ್ಸರಾ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರಗಳಲ್ಲೂ ನಟಿಸಿರುವ ಅಪ್ಸರಾ ಮರಣ ಕುರಿತು ಯಾರೂ ಮಾತನಾಡಲಿಲ್ಲ. ಬಲರಾಜವಾಡಿ, ಶೋಭರಾಜ್, ವರ್ಧನ್, ಪದ್ಮಾವಾಸಂತಿ, ಪಟ್ರೆ ನಾಗರಾಜ್, ಕಡ್ಡಿ ವಿಶ್ವ, ಸೂರಜ್ ನಟಿಸಿದ್ದಾರೆ.