ಸಾರಾಂಶ
ಟೆನಂಟ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸೋನು ಗೌಡ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಮೊದಲು ಈ ಸಿನಿಮಾದ ಕಥೆ ಕೇಳಿ ಮಾಡಬೇಕಾ ಬೇಡವಾ ಅಂತ ಯೋಚನೆ ಮಾಡಿದ್ದೆ. ಯಾಕೆಂದರೆ ಈ ರೀತಿಯ ಪಾತ್ರ ನಾನು ಈ ಹಿಂದೆ ಮಾಡಿಲ್ಲ. ಹೀಗಾಗಿ ಇಂಥ ಪಾತ್ರದಲ್ಲಿ ಪ್ರೇಕ್ಷಕರು ನನ್ನ ನೋಡುತ್ತಾರೆಯೇ ಎನ್ನುವ ಭಯ ಇತ್ತು. ಆದರೆ ಕಥೆ ಇಷ್ಟ ಆಗಿ ಒಪ್ಪಿಕೊಂಡೆ’.
- ಹೀಗೆ ಹೇಳಿದ್ದು ಸೋನು ಗೌಡ. ಶ್ರೀಧರ್ ಶಾಸ್ತ್ರಿ ನಿರ್ದೇಶನದ, ನಾಗರಾಜ್ ಟಿ ನಿರ್ಮಾಣದ ‘ಟೆನಂಟ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿದರು. ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಜನಮೆಚ್ಚುಗೆ ದೊರೆತಿದೆ. ಈ ಸಿನಿಮಾ ನ.22ರಂದು ಬಿಡುಗಡೆ ಆಗುತ್ತಿದೆ.ನಿರ್ದೇಶಕ ಶ್ರೀಧರ್ ಶಾಸ್ತ್ರಿ, ‘ಒಂದೇ ಮನೆಯಲ್ಲಿ ನಡೆಯುವ ಕ್ರೈಮ್ ಥ್ರಿಲ್ಲರ್ ಕತೆಯನ್ನು ಒಳಗೊಂಡ ಚಿತ್ರವಿದು. ಲಾಕ್‍ಡೌನ್ ಕಾಲದ ಕತೆಯನ್ನು ಇಟ್ಟುಕೊಂಡು ಮಾಡಿದ್ದು, 5 ಪ್ರಮುಖ ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ’ ಎಂದರು.
ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ತಿಲಕ್, ರಾಕೇಶ್ ಮಯ್ಯ, ಸೋನು ಗೌಡ ನಟಿಸಿರುವ ಈ ಚಿತ್ರ ನಿರೀಕ್ಷೆ ಹುಟ್ಟಿಸಿದೆ. ಗಿರೀಶ್ ಹೊತೂರ್ ಸಂಗೀತ, ಮನೋಹರ್ ಕ್ಯಾಮೆರಾ ಚಿತ್ರಕ್ಕಿದೆ.