ಸಾರಾಂಶ
ನಟ ರವಿಚಂದ್ರನ್ ಅವರು ಅಥಿತಿ ಪಾತ್ರದಲ್ಲಿ ನಟಿಸುತ್ತಿರುವ ತಪಸ್ಸಿ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು.
ಕನ್ನಡಪ್ರಭ ಸಿನಿವಾರ್ತೆ
ಮಹಿಳಾ ಪ್ರಧಾನ ‘ತಪಸ್ಸಿ’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಸ್ಪೆನ್ಸರ್ ಮ್ಯಾಥ್ಯೂ ನಿರ್ದೇಶನ, ನಿರ್ಮಾಣದ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನೈಜ ಘಟನೆಯಾಧಾರಿತ ಚಿತ್ರವಿದು. ಅಮ್ಮಯ್ರ ಗೋಸ್ವಾಮಿ ನಾಯಕಿ ಚಿತ್ರದ ನಾಯಕಿ.ಮುಹೂರ್ತ ಸಂದರ್ಭದಲ್ಲಿ ರವಿಚಂದ್ರನ್, ‘ನಾನು ಇಲ್ಲಿ ಪ್ರಾಧ್ಯಾಪಕನ ಪಾತ್ರದಲ್ಲಿ ನಟಿಸುತ್ದಿದ್ದೇನೆ. ಸಾಮಾಜಿಕ ಸಂದೇಶ ಸಾರುವ ಪಾತ್ರವಿದು. ಹೀಗಾಗಿ ನಾನೇ ಈ ಪಾತ್ರ ಮಾಡಬೇಕು ಎಂಬುದು ನಿರ್ದೇಶಕರ ಆಸೆ. ಮ್ಯಾಥ್ಯೂ ನನಗೆ ಒಳ್ಳೆಯ ಸ್ನೇಹಿತ. ಹೀಗಾಗಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದರು. ‘ಈ ಚಿತ್ರದಲ್ಲಿರುವ ಸಂದೇಶ ಜನರಿಗೆ ತಲುಪಬೇಕು ಎಂದರೆ ರವಿಚಂದ್ರನ್ ಅವರೇ ಸೂಕ್ತ’ ಎಂದರು ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ.
ಪ್ರಸಾದ್, ಪ್ರಜ್ವಲ್, ಸಚಿನ್, ಅನುಷ ಕಿಣಿ, ಭಾಸ್ಕರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.