ವಿಶ್ವ ಸುಂದರಿ ಕಿರೀಟ ಮಿಸ್ ಮಾಡ್ಕೊಂಡ ಮಣಿಕಾ ವಿಶ್ವಕರ್ಮ ಟ್ರೆಂಡ್ ಸೃಷ್ಟಿಸೋದ್ರಲ್ಲಿ ಹಿಂದೆ ಬಿದ್ದಿಲ್ಲ. ಮತ್ಸಕನ್ಯೆಯ ಹಾಗೆ ಮೈಯೇ ಮಿನುಗು ಮಿನುಗಾಗಿ ಹೊಳೆಯುವ ಗೋಲ್ಡನ್ ಗೌನ್, ಭುಜವನ್ನು ಸವರಿ ತೋಳಿನಿಂದ ಇಳಿಬಿದ್ದ ಬಂಗಾರದ ಎಳೆಗಳು. - ಮಾರ್ಗಶಿರ ಮಾಸಕ್ಕೆ ಟಸ್ಸೆಲ್ ಟ್ರೆಂಡ್ ಬಂತು
ನಿತ್ತಿಲೆ
ವಿಶ್ವ ಸುಂದರಿ ಕಿರೀಟ ಮಿಸ್ ಮಾಡ್ಕೊಂಡ ಮಣಿಕಾ ವಿಶ್ವಕರ್ಮ ಟ್ರೆಂಡ್ ಸೃಷ್ಟಿಸೋದ್ರಲ್ಲಿ ಹಿಂದೆ ಬಿದ್ದಿಲ್ಲ. ಮತ್ಸಕನ್ಯೆಯ ಹಾಗೆ ಮೈಯೇ ಮಿನುಗು ಮಿನುಗಾಗಿ ಹೊಳೆಯುವ ಗೋಲ್ಡನ್ ಗೌನ್, ಭುಜವನ್ನು ಸವರಿ ತೋಳಿನಿಂದ ಇಳಿಬಿದ್ದ ಬಂಗಾರದ ಎಳೆಗಳು. ಆಕೆ ಹಾಗೇ ತಿರುಗಿದರೆ ಆ ಎಳೆಗಳು ಆಕೆಯ ಸುತ್ತ ಬಂಗಾರದ ಪ್ರಭೆಯನ್ನೇ ಸೃಷ್ಟಿಸಿಬಿಡುತ್ತವೆ.
ಟಸ್ಸೆಲ್ ಟ್ರೆಂಡ್
ಟಸ್ಸೆಲ್ ಟ್ರೆಂಡ್ ಅನ್ನು ಸುಂದರಿಯೊಬ್ಬಳು ತನ್ನ ಉಡುಗೆಯ ಭಾಗವಾಗಿಸಿದ್ದು ಆಕೆಯ ಫ್ಯಾನ್ಸ್‌ಗೂ ಪ್ರೇರಣೆಯಾಗಿದೆ.
ಕೃತಿ ಸನೂನ್ ಅನ್ನೋ ನೀಳ ನಾಸಿಕದ ಚೆಲುವೆ ಇತ್ತೀಚೆಗೆ ಸಿನಿಮಾ ಪ್ರಮೋಶನ್ ವೇಳೆ ಅನಿತಾ ಡೋಂಗ್ರೆ ಡಿಸೈನ್ ಮಾಡಿರುವ ಕೆಂಪು ಸೀರೆಯಲ್ಲಿ ಮಿಂಚಿದ್ರು. ವಿಶೇಷ ಅಂದರೆ ಈ ಸೀರೆಯ ಬಾರ್ಡರ್ ಅನ್ನೇ ಟಸೆಲ್ ಟ್ರೆಂಡ್‌ಗೆ ಸೆಟ್ ಮಾಡಿ ಕೊರಳ ಹಾರವಾಗಿಸಿದ್ದು ಸಖತ್ ಸ್ಪೆಷಲ್ ಅನಿಸಿದೆ.
ತುಂಡುಡುಗೆ ಮೇಲೆ ಟಸ್ಸೆಲ್ ಡಿಸೈನ್
ದಿಶಾ ಪಟಾನಿ ಕೆಲ ದಿನಗಳ ಹಿಂದೆ ಬಹಳ ಮಾದಕವಾಗಿ ತುಂಡುಡುಗೆ ಮೇಲೆ ಟಸ್ಸೆಲ್ ಡಿಸೈನ್ ಇರುವ ಔಟ್‌ಫಿಟ್‌ನಲ್ಲಿ ಪಡ್ಡೆಗಳ ಮೈ ಬೆಚ್ಚಗಾಗಿಸಿದರು. ಗೌನ್‌ಗಳಲ್ಲಿ, ಟ್ರೆಂಡಿ ಔಟ್‌ಫಿಟ್‌ಗಳಲ್ಲಿ ಈಗ ಟಸ್ಸೆಲ್ ವರ್ಕ್ ಬಹಳ ಜನಪ್ರಿಯವಾಗುತ್ತಿದೆ.
ಆ್ಯಕ್ಸೆಸರೀಸ್‌ನಲ್ಲೂ ಈ ಟ್ರೆಂಡ್ ಸೌಂಡ್ ಮಾಡುತ್ತಿದೆ.
ಟಸೆಲ್ ಕಿವಿಯೋಲೆಗಳು ಅನಾದಿ ಕಾಲದಿಂದ ಬಾಲಿವುಡ್‌ನಲ್ಲಿ ಧಿಮಾಕಿನ ಲುಕ್ ಬೀರುತ್ತಿವೆ. ಕರೀನಾ ಕಪೂರ್‌ಗೆ ಈ ಜೂಲು ಜೂಲಿನ ಇಯರ್ ರಿಂಗ್‌ಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ.
ಬಾಲಿವುಡ್ ಅನೇಕ ಸುಂದರಿಯರು ಟಸ್ಸೆಲ್ ಟ್ರೆಂಡ್‌ನಲ್ಲಿ ಹೊಸ ಹೊಸ ಸ್ಟೈಲ್ ಸೃಷ್ಟಿಸುತ್ತಿದ್ದಾರೆ. ಅವನ್ನು ನೋಡಲು ಎರಡು ಕಣ್ಣು ಸಾಲದು ಅನ್ನೋದು ಟ್ರೋಲಿಗರ ಕಿಂಡಲ್.


