ಧರ್ಮ ಕೀರ್ತಿರಾಜ್ ನಟನೆಯ ಕ್ರೈಮ್‌ ಥ್ರಿಲ್ಲರ್ ಟೆನೆಂಟ್ ಸಿನಿಮಾ ಟೀಸರ್ ಬಿಡುಗಡೆ

| Published : Oct 16 2024, 12:50 AM IST / Updated: Oct 16 2024, 07:36 AM IST

ಸಾರಾಂಶ

ಕ್ರೈಮ್‌ ಥ್ರಿಲ್ಲರ್ ಟೆನೆಂಟ್ ಸಿನಿಮಾ ಟೀಸರ್ ಬಿಡುಗಡೆಯಾಗಿದೆ.

 ಸಿನಿವಾರ್ತೆ

ಧರ್ಮ ಕೀರ್ತಿರಾಜ್‌, ಉಗ್ರಂ ಮಂಜು, ಸೋನು ಗೌಡ ನಟನೆಯ ‘ಟೆನೆಂಟ್‌’ ಸಿನಿಮಾದ ಟೀಸರ್‌ ವೇದಸ್ಯ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಟೆನೆಂಟ್ ಸಿನಿಮಾ ನವೆಂಬರ್‌ 22ಕ್ಕೆ ಬಿಡುಗಡೆಯಾಗಲಿದೆ.

ಶ್ರೀಧರ್ ಶಾಸ್ತ್ರಿ ಈ ಚಿತ್ರದ ನಿರ್ದೇಶಕರು. ತಿಲಕ್, ರಾಕೇಶ್ ಮಯ್ಯ ಮುಖ್ಯ ಪಾತ್ರದಲ್ಲಿದ್ದಾರೆ. ನಾಗರಾಜ್ ಟಿ ಈ ಸಿನಿಮಾದ ನಿರ್ಮಾಪಕರು. ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರಿಟಿಗಳು ಈ ಚಿತ್ರದ ಟೀಸರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.