ಮಾಲಾಶ್ರೀ ನಟನೆಯ ಹೊಸ ಸಿನಿಮಾ ತಾಯಿನೇ ದೇವರ : ಚಿತ್ರಕ್ಕೆ ಇತ್ತೀಚಿಗೆ ನಡೆದ ಮುಹೂರ್ತ

| Published : Sep 19 2024, 01:49 AM IST / Updated: Sep 19 2024, 05:25 AM IST

Malashri

ಸಾರಾಂಶ

‘ತಾಯಿನೇ ದೇವರ?’ ಚಿತ್ರಕ್ಕೆ ಇತ್ತೀಚಿಗೆ ಮುಹೂರ್ತ ನಡೆದಿದೆ. ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 ಸಿನಿವಾರ್ತೆ

‘ತಾಯಿನೇ ದೇವರ?’ ಚಿತ್ರಕ್ಕೆ ಇತ್ತೀಚಿಗೆ ಮುಹೂರ್ತ ನಡೆದಿದೆ. ಡಾ ಸಾಯಿ ಸತೀಶ್ ತೋಟಯ್ಯ ಈ ಸಿನಿಮಾ ಬರೆದು, ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನ್‌ ಎಚ್‌ ಕಾಗಿನಲ್ಲಿ ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಮಾಲಾಶ್ರೀ, ‘ಇಷ್ಟು ವರ್ಷ ಪೋಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡು ವಿಲನ್‌ಗಳ ಜತೆಗೆ ಫೈಟ್‌ ಮಾಡುತ್ತಿದ್ದೆ. ಈಗ ಹೊಸ ರೀತಿಯ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸಿನಿಮಾದಲ್ಲಿ ಭವ್ಯ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ’ ಎಂದರು.

ಮಾಜಿ ಸಚಿವ ಹೆಚ್‌ ಎಂ ರೇವಣ್ಣ ಅವರ ತಮ್ಮನ ಮಗಳು ಅನ್ವಿತಾ ಮೂರ್ತಿ ಚಿತ್ರದ ನಾಯಕಿಯರಲ್ಲೊಬ್ಬರು. ದೊಡ್ಡಣ್ಣ, ಡಿಂಗ್ರಿ ನಾಗರಾಜ್‌, ಹೊನ್ನವಳ್ಳಿ ಕೃಷ್ಣ, ಬಾಲರಾಜ್‌, ಸ್ವಾತಿ ಗುರುದತ್‌, ರೇಖಾ ದಾಸ್‌, ಅಪೂರ್ವ, ಜೀವಿತಾ ಪ್ರಕಾಶ್‌ ತಾರಾಬಳಗದಲ್ಲಿದ್ದಾರೆ.