ಬಿಗ್‌ಬಾಸ್‌ ಸೀಸನ್‌ 12ರ ವಿಜೇತ ಗಿಲ್ಲಿ ನಟ ಇದೀಗ ಸಿನಿಮಾ ಒಂದರಲ್ಲಿ ನಾಯಕನಾಗಿ ಮಿಂಚಲು ರೆಡಿ ಆಗ್ತಿದ್ದಾರೆ. ಈ ಸಿನಿಮಾಕ್ಕೆ ‘ಟಾಕ್ಸಿಕ್‌’, ‘ಜನನಾಯಗನ್‌’ನಂಥಾ ಸಿನಿಮಾ ನಿರ್ಮಿಸಿರುವ ಕೆವಿಎನ್‌ ಸಂಸ್ಥೆ ಬೆಂಬಲವಾಗಿ ನಿಂತಿದೆ. ಸಿನಿಮಾವನ್ನು ಅರ್ಪಣೆ ಮಾಡಲಿದೆ.

 ಸಿನಿವಾರ್ತೆ

ಹೀರೋ ಆಗಿ ನಟಿಸುತ್ತಿರುವ ಗಿಲ್ಲಿ ಅವರೇ, ನಿಮಗೆ ಅಭಿನಂದನೆ

ಈ ಬಗ್ಗೆ ಮಾತನಾಡಿದ ನಿರ್ಮಾಪಕ ವೆಂಕಟ್‌ ನಾರಾಯಣ್‌, ‘ಹೀರೋ ಆಗಿ ನಟಿಸುತ್ತಿರುವ ಗಿಲ್ಲಿ ಅವರೇ, ನಿಮಗೆ ಅಭಿನಂದನೆ. ನಾನು ಈಗಾಗಲೇ ಕಥೆ ಕೇಳಿದ್ದೇನೆ. ನಿಮಗೆ ಸೊಗಸಾಗಿ ಹೊಂದುವಂಥಾ ಸ್ಟೋರಿಲೈನ್‌ ಇದೆ. ಪ್ರತಿಭೆ ಇರುವವರಿಗೆಲ್ಲ ಕೆವಿಎನ್‌ ಪ್ರೊಡಕ್ಷನ್‌ ಬೆಂಬಲ ಯಾವಾಗಲೂ ಇರುತ್ತದೆ’ ಎಂದಿದ್ದಾರೆ.

ಜೂನ್‌.21ರಂದು ಸಿನಿಮಾದ ಮುಹೂರ್ತ

ಜೂನ್‌.21ರಂದು ಸಿನಿಮಾದ ಮುಹೂರ್ತ ನೆರವೇರಲಿದೆ. ಅಂದೇ ಶೀರ್ಷಿಕೆ ರಿವೀಲ್‌ ಆಗಲಿದೆ. ಚಂದ್ರಮೋಹನ್‌ ಈ ಚಿತ್ರದ ನಿರ್ದೇಶಕರು. ಇದೊಂದು ಮಂಡ್ಯ ಭಾಗದ ಹಳ್ಳಿ ಸೊಗಡಿನ ಕಾಮಿಡಿ ಚಿತ್ರವಾಗಿದ್ದು, ಕೆವಿಎನ್‌ ಪ್ರೊಡಕ್ಷನ್‌ನ ಕಾರ್ಯಕಾರಿ ನಿರ್ಮಾಪಕರಾದ ನವೀನ್‌ ಮತ್ತು ಹರೀಶ್‌ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.