ಮಿಶ್ರ ಪ್ರತಿಕ್ರಿಯೆಗಳ ನಡುವೆಯೇ ಯಶ್‌ ಅವರ ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್‌ 250 ಕೋಟಿ ರು. ದಾಟಿದೆ.ಇನ್ನೊಂದೆಡೆ ಸೋಷಿಯಲ್‌ ಮೀಡಿಯಾದಲ್ಲಿ ಯಶ್‌ ಅವರ ಬಯೋ ಟ್ರೆಂಡಿಂಗ್‌ ಆಗಿದೆ.

ಸಿನಿವಾರ್ತೆ

ಮಿಶ್ರ ಪ್ರತಿಕ್ರಿಯೆಗಳ ನಡುವೆಯೇ ಯಶ್‌ ಅವರ ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್‌ 250 ಕೋಟಿ ರು. ದಾಟಿದೆ.

ಇನ್ನೊಂದೆಡೆ ಸೋಷಿಯಲ್‌ ಮೀಡಿಯಾದಲ್ಲಿ ಯಶ್‌ ಅವರ ಬಯೋ ಟ್ರೆಂಡಿಂಗ್‌ ಆಗಿದೆ. ತನ್ನ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ಗಳ ಪ್ರೊಫೈಲ್‌ ಬಯೋದಲ್ಲಿ ಯಶ್‌, ‘ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ’ ಎಂದು ಬರೆದುಕೊಂಡಿದ್ದಾರೆ.

ಯಶ್‌ ಅಭಿಮಾನಿ ವಲಯದಲ್ಲಿ ಸಂಚಲನ

ಇದು ಯಶ್‌ ಅಭಿಮಾನಿ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿನಿಮಾದ ಬಗೆಗಿನ ನೆಗೆಟಿವ್‌ ಟ್ರೋಲ್‌ಗಳಿಗೆ ರಾಕಿ ಭಾಯ್‌ ಅಭಿಮಾನಿಗಳು ಯಶ್‌ ಬಯೋದ ಸ್ಕ್ರೀನ್‌ ಶಾಟ್ ಶೇರ್‌ ಮಾಡಿ, ಒರಿಜಿನಲ್‌ ಪ್ರಯತ್ನಗಳಿಗೆ ಸೋಲಿಲ್ಲ ಎಂದು ಪ್ರತಿಕ್ರಿಯೆ ಕೊಡುತ್ತಿದ್ದಾರೆ.