ದ ಸೂಟ್‌ ಟ್ರೇಲರ್‌ ಬಿಡುಗಡೆ

| Published : May 10 2024, 01:36 AM IST / Updated: May 10 2024, 07:42 AM IST

Film theater

ಸಾರಾಂಶ

ಹೊಸಬರೇ ಸೇರಿ ಮಾಡಿರುವ ದ ಸೂಟ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

 ಸಿನಿವಾರ್ತೆ

ಮೇ 17ಕ್ಕೆ ‘ದ ಸೂಟ್‌’ ಸಿನಿಮಾ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಎಸ್‌ ಭಗತ್‌ರಾಜ್‌ ನಿರ್ದೇಶಿಸಿ, ಮಾಲತಿ ಗೌಡ, ರಾಮಸ್ವಾಮಿ ನಿರ್ಮಿಸಿರುವ ಚಿತ್ರವಿದು. ಸಲ್ಮಾನ್‌ ಖಾನ್‌ ಅವರಿಗೆ ಮ್ಯಾನೇಜರ್‌ ಆಗಿದ್ದ ಕಮಲ್‌ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಭಗತ್‌ರಾಜ್‌, ‘ನಾವು ಧರಿಸುವ ಸೂಟ್‌ಗೆ ವಿಶೇಷತೆ ಇದೆ. ಇದು ಬದುಕು ಹಾಗೂ ಭಾವನೆಗಳ ಸಂಗಮ. ನಮ್ಮ ಚಿತ್ರಕ್ಕೆ ಸೂಟೇ ಕಥಾನಾಯಕನೆಂದು ಕೇಳಿ ಹಲವರು ಆಶ್ಚರ್ಯಪಟ್ಟರು. ಸೂಟ್‌ ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಈ ಸೂಟ್‌ನ ಮೂಲಕ ತೋರಿಸಿದ್ದೇವೆ. ‘ಸೂಟ್’ ನ ಬಗ್ಗೆ ಅನೇಕರು ಕವನಗಳ ಮೂಲಕ ಬರೆದಿದ್ದಾರೆ. ಅದನ್ನು ಸಂಕಲನವಾಗಿ ಹೊರ ತಂದಿದ್ದೇವೆ’ ಎಂದರು.

ಶಾಸಕ ಗೋಪಾಲಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್‌ ಅಥಿತಿಗಳಾಗಿ ಬಂದಿದ್ದರು. ನಟ ಧ್ರುವ ಸರ್ಜಾ ಟ್ರೇಲರ್‌ ನೋಡಿ ಮೆಚ್ಚಿಕೊಂಡಿದ್ದ ವಿಡಿಯೋ ಮತ್ತು ಟ್ರೇಲರ್‌ ಪ್ರದರ್ಶಿಸಲಾಯಿತು.