ಸಾರಾಂಶ
ಬಿಟಿಎಸ್
ಐದು ಮಂದಿ ಯುವ ನಿರ್ದೇಶಕರು ಅತ್ಯುತ್ಸಾಹದಿಂದ ಮಾಡಿರುವ ಚಿತ್ರ. ಇಲ್ಲಿ ‘ಬಿಟಿಎಸ್’ ಅಂದರೆ ‘ಬಿಹೆಂಡ್ ದಿ ಸೀನ್ಸ್’ ಎಂಬ ಕಾನ್ಸೆಪ್ಟ್. ಸಿನಿಮಾ ಸ್ಕ್ರೀನ್‌ನ ಹಿಂದಿನ ಸೂಕ್ಷ್ಮಗಳನ್ನು 5 ಕಥೆಗಳ ಮೂಲಕ ಹೇಳಲಾಗಿದೆ. 5 ಕಥೆಗಳನ್ನು ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್.ಶಂಕದ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯಾ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್ ನೀನಾಸಂ ನಟಿಸಿದ್ದಾರೆ.
ಸಂತೋಷ ಸಂಗೀತ
ಪ್ರೀತಿ, ಬದ್ಧತೆ, ನೈತಿಕತೆ ಬಗೆಗಿನ ಕಥಾಹಂದರ ಹೊಂದಿರುವ ಸಿನಿಮಾ ‘ಸಂತೋಷ ಸಂಗೀತ’ ಇಂದು ರಿಲೀಸ್ ಆಗುತ್ತಿದೆ. ‘ಈ ಚಿತ್ರವು ಪ್ರೀತಿಯ ಶ್ರೇಷ್ಠತೆ, ಬದ್ಧತೆ ಹಾಗೂ ಸಂಬಂಧಗಳ ಮೌಲ್ಯವನ್ನು ತೋರಿಸುತ್ತದೆ. ಅಹಂ, ಸ್ವಾರ್ಥ, ತಪ್ಪು ನಿರ್ಧಾರಗಳು, ಪ್ರೀತಿಯ ನಾಜೂಕು ಸಂಬಂಧವನ್ನು ಹೇಗೆ ಹಾಳು ಮಾಡುತ್ತವೆ ಮತ್ತು ವ್ಯಕ್ತಿಯ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ ಎಂಬುದನ್ನು ಚಿಂತನಶೀಲ ನೆಲೆಯಲ್ಲಿ ಕಟ್ಟಿಕೊಡುತ್ತದೆ’ ಎಂದು ನಿರ್ದೇಶಕ ಸಿದ್ದು ಹೇಳುತ್ತಾರೆ. ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ, ನಾಯಕಿ. ನಕ್ಷತ್ರ, ದೊಡ್ಡಣ್ಣ, ಅವಿನಾಶ್, ಲಯ ಕೋಕಿಲ, ಮಡೆನೂರ್ ಮನು ನಟಿಸಿದ್ದಾರೆ.