ಸಾರಾಂಶ
ಸಂಗೀತ ನಿರ್ದೇಶಕ ಹಂಸಲೇಖ ಅವರ ಗರಡಿಯಲ್ಲಿ ಫಳಗಿರುವ ಯುವ ಪ್ರತಿಭೆಗಳ ತಂಡ ರೂಪಿಸಿರುವ ಸಿನಿಮಾ ತೂತು ಕಾಸು
ಕನ್ನಡಪ್ರಭ ಸಿನಿವಾರ್ತೆ
ನಾದಬ್ರಹ್ಮ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಪಳಗಿದ ಪ್ರತಿಭೆಗಳು ಸೇರಿಕೊಂಡು ಮಾಡಿರುವ ‘ತೂತ್ ಕಾಸು’ ಚಿತ್ರದ ಹಾಡು ಹಾಗೂ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಯಿತು. ಹಾಸ್ಯ ಪ್ರಧಾನ ಚಿತ್ರ ಇದಾಗಿದ್ದು, ರವಿ ತೇಜಸ್ ನಿರ್ದೇಶನ ಮಾಡಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ನಾಯಕನಾಗಿ ವರುಣ್ ದೇವಯ್ಯ, ನಾಯಕಿಯರಾಗಿ ಪ್ರಿಷಾ, ಪ್ರೇರಣ ಭಟ್ ನಟಿಸಿದ್ದಾರೆ. ರವಿ ತೇಜಸ್ ಮಾತನಾಡಿ, ‘ತೂತ್ ಕಾಸು 1942 ರಿಂದ 1947 ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ತೂತ್ ಕಾಸನ್ನು ನಿಲ್ಲಿಸಲಾಯಿತು. ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ. ನಮ್ಮ ಚಿತ್ರ ಮಾಫಿಯಾ ಗ್ಯಾಂಗ್ ಬಗ್ಗೆ ಇದೆ. ಆ ಮಾಫಿಯಾ ಯಾವುದು ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು’ ಎಂದು ಹೇಳಿದರು. ಚಿತ್ರದ ಹಾಸ್ಯ ಪಾತ್ರದಲ್ಲಿ ವಿನೋದ್ ಆನಂದ್ ನಟಿಸಿದ್ದಾರೆ.