ಇಂದು ಡಾ. ರಾಜ್‌ಕುಮಾರ್‌ ಪುಣ್ಯಸ್ಮರಣೆ

| Published : Apr 12 2024, 01:02 AM IST / Updated: Apr 12 2024, 05:14 AM IST

dr rajkumar

ಸಾರಾಂಶ

ಇಂದು ಡಾ ರಾಜ್‌ಕುಮಾರ್‌ ಅವರ 18ನೇ ವರ್ಷದ ಪುಣ್ಯ ಸ್ಮರಣೆ

ಇಂದು ಡಾ ರಾಜ್‌ಕುಮಾರ್‌ ಅವರ ಪುಣ್ಯ ಸ್ಮರಣೆ. ಅಣ್ಣಾವ್ರು ಅವರು ಅಗಲಿ ಇಂದಿಗೆ (12 ಏಪ್ರಿಲ್‌ 2006) 18 ವರ್ಷ. ಪ್ರತಿ ವರ್ಷದಂತೆ ಈ ವರ್ಷವೂ ಡಾ ರಾಜ್‌ಕುಮಾರ್‌ ಪುಣ್ಯಸ್ಮರಣೆಯನ್ನು ಅವರ ಅಭಿಮಾನಿಗಳು, ಕುಟುಂಬದವರು ಆಚರಣೆ ಮಾಡಲಿದ್ದಾರೆ.

ಬೆಂಗಳ‍ೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ ರಾಜ್‌ಕುಮಾರ್‌ ಸ್ಮಾರಕಕ್ಕೆ ರಾಜ್‌ ಕುಟುಂಬದವರಿಂದ ವಿಶೇಷ ಪೂಜೆ ನಡೆಯಲಿದೆ. ಆ ನಂತರ ಸ್ಮಾರಕದ ಬಳಿ ಆಗಮಿಸುವ ಅಭಿಮಾನಿಗಳಿಗೆ ಕುಟುಂಬದವರಿಂದ ಅನ್ನದಾನ ನಡೆಯಲಿದೆ. ಆರೋಗ್ಯ ತಪಾಸಣೆ ಶಿಬಿರ ಕೂಡ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವರ್ಷವೂ ಪುಣ್ಯ ಸ್ಮರಣೆಯ ಅಂಗವಾಗಿ ರಾಜ್‌ ಅವರ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ, ನೇತ್ರದಾನಕ್ಕೆ ನೋಂದಣಿ ಸೇರಿದಂತೆ ಹಲವು ರೀತಿಯ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿದ್ದಾರೆ. ಏ.24ರಂದು ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ಆಚರಣೆ ನಡೆಯಲಿದೆ.