ಮುಂಬೈಯಲ್ಲಿ ಟಾಕ್ಸಿಕ್‌ ಮುಂದಿನ ಹಂತದ ಶೂಟಿಂಗ್

| Published : Oct 09 2024, 01:40 AM IST

ಸಾರಾಂಶ

ಅಕ್ಟೋಬರ್‌ ಕೊನೆಯ ವಾರದಲ್ಲಿ ಮತ್ತೆ ಟಾಕ್ಸಿಕ್‌ ಚಿತ್ರೀಕರಣ ಆರಂಭವಾಗಲಿದೆ. ಸುಮಾರು 45 ದಿನಗಳ ಶೆಡ್ಯೂಲ್ ಇದೆ ಎನ್ನಲಾಗಿದೆ.

ಕನ್ನಡಪ್ರಭ ಸಿನಿವಾರ್ತೆ

ಯಶ್‌ ಸೇರಿದಂತೆ ‘ಟಾಕ್ಸಿಕ್‌’ ಸಿನಿಮಾ ತಂಡ ಪ್ರಸ್ತುತ ಮುಂಬೈನಲ್ಲಿದೆ. ‘ಟಾಕ್ಸಿಕ್‌’ ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕೆ ಮುಂಬೈನಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಯಶ್‌, ಕಿಯಾರ, ಹ್ಯೂಮಾ ಖುರೇಷಿ, ನಯನತಾರಾ ಜೊತೆಗೆ ಬ್ರಿಟಿಷ್‌ ನಟರಾದ ಡೇರೆಲ್‌ ಡಿಸಿಲ್ವ, ಬೆನೆಡಿಕ್ಟ್‌ ಗ್ಯಾರೆಟ್‌ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್‌ ಕೊನೆಯ ವಾರದಲ್ಲಿ ಮತ್ತೆ ಚಿತ್ರೀಕರಣ ಆರಂಭವಾಗಲಿದೆ. ಸುಮಾರು 45 ದಿನಗಳ ಶೆಡ್ಯೂಲ್ ಇದೆ ಎನ್ನಲಾಗಿದೆ. ಸದ್ಯಕ್ಕೀಗ ಯಶ್‌ ಹಾಗೂ ಕಿಯಾರಾ ಹಾಡಿನ ಸನ್ನಿವೇಶದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ಸಿನಿಮಾದ ಮೊದಲ ಹಂತದ ಶೂಟಿಂಗ್‌ ಮುಕ್ತಾಯಗೊಂಡಿದ್ದು, ನಯನತಾರಾ, ಹ್ಯೂಮಾ ಖುರೇಷಿ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ‘ಟಾಕ್ಸಿಕ್‌’ ಸಿನಿಮಾವನ್ನು ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡುತ್ತಿದ್ದಾರೆ.