ಯು 235 ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಇದು ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ.

 ಸಿನಿವಾರ್ತೆ

ದೇವರಾಜ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಯು 235’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಸಿ ಎನ್‌ ಚನ್ನೇಗೌಡ ನಿರ್ದೇಶನದ ಈ ಚಿತ್ರವನ್ನು ಗೀತಾ, ನಿತ್ಯಾನಂದ ನಿರ್ಮಿಸಿದ್ದಾರೆ.

ನಿರ್ದೇಶಕ ಚನ್ನೇಗೌಡ, ‘ಸಿನಿಮಾ ನಿರ್ದೇಶನ ನನ್ನ ಬಹುದಿನದ ಕನಸು. ‘ಯು 235’ ಮೂಲಕ ನನಸಾಗಿದೆ. ಸಸ್ಪೆನ್‌, ಥ್ರಿಲ್ಲರ್‌ ಕತೆ ಹೊಂದಿರುವ ಈ ಚಿತ್ರದಲ್ಲಿನ ಕೋರ್ಟ್‌ ರೂಮ್‌ ಸನ್ನಿವೇಶಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮಾಡದ, ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು’ ಎಂದರು.

ವಿವೇಕ್, ಪೂಜಾ ದುರ್ಗಣ್ಣ, ದಿನೇಶ್‌ ಮಂಗಳೂರು, ರಾಜೇಶ್‌ ನಟರಂಗ, ಹಿಮ, ಹನುಮಂತೇ ಗೌಡ ತಾರಾಬಳಗದಲ್ಲಿದ್ದಾರೆ. ಕೃಷ್ಣಪ್ಪ ಕತೆ ಬರೆದಿದ್ದಾರೆ.