ವಾತಾಪಿ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿದ ಹೆಚ್‌ ಡಿ ಕುಮಾರಸ್ವಾಮಿ

| Published : Jan 17 2024, 01:45 AM IST

ಸಾರಾಂಶ

ವಾತಾಪಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಹೆಚ್‌ ಡಿ ಕುಮಾರಸ್ವಾಮಿ.

ಕನ್ನಡಪ್ರಭ ಸಿನಿವಾರ್ತೆ

ಪ್ಯಾನ್‌ ವರ್ಲ್ಡ್‌ ಚಿತ್ರ ‘ವಾತಾಪಿ’ಯ ಪೋಸ್ಟರ್‌ ಅನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಹಿಂದೆ ‘ಕ್ಷಿಪ್ರ’ ಸಿನಿಮಾ ನಿರ್ದೇಶನ ಮಾಡಿದ್ದ ಸತೀಶ್ ಕೃಷ್ಣ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್, ಚೈನೀಸ್ ಮತ್ತು ಜಪಾನೀಸ್ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಶಿವ ಪೂರ್ಣ(ಲೋಕೇಶ್), ಜಿ.ಕೆ.ತಿರುಮಲೇಶ್ ಹಾಗೂ ಮುತ್ತುರಾಜ್ ನಿರ್ಮಾಪಕರು. ಪುರಾಣದ ಹಿನ್ನೆಲೆಯ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಾಜೀವ್‌ ರಾಥೋಡ್, ಪಲ್ಲವಿ ಪ್ರಕಾಶ್, ರಾಬರ್ಟ್, ಜಿ.ಕೆ.ತಿರುಮಲೇಶ್, ಕಸ್ತೂರಿ, ರಫೀಕ್, ಮಂಜೇಶ್‌ ಗೌಡ, ಚೈತ್ರಾ, ಭಾನು, ಶ್ರುತಿ, ಬೇಬಿ ಆರಾಧ್ಯ ತಾರಾಗಣದಲ್ಲಿದ್ದಾರೆ.